ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ ಕ್ಷೇತ್ರದಲ್ಲಿ ಉದ್ಯೋಗಾವಕಾಶ

Last Updated 23 ಜೂನ್ 2019, 16:00 IST
ಅಕ್ಷರ ಗಾತ್ರ

ಹೊಸಕೋಟೆ: ಯೋಗ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ ಎಂದು ಎಸ್ ವ್ಯಾಸ್ ಯೋಗ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಪ್ರೊ.ಎಂ.ಕೆ.ಶ್ರೀಧರ್ ಹೇಳಿದರು.

ಅವರು ಸ್ವಾಮಿ ವಿವೇಕಾನಂದ ಯೋಗ ಶಿಕ್ಷಣ ಸಮಿತಿಯ ವತಿಯಿಂದ ಇಲ್ಲಿನ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಿರಂತರ ಯೋಗಾಭ್ಯಾಸ ಮಾಡಿ ಪರಿಣತರಾದವರಿಗೆ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಯೋಗಾಸನ ನಡೆಸಲು ಬೇಡಿಕೆಯಿದೆ. ಅದರಿಂದ ಉದ್ಯೋಗಾವಕಾಶ ಪಡೆಯಬಹುದು ಎಂದರು. ದೇಶದ 900ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು ಶಾಲಾ ಕಾಲೇಜುಗಳಲ್ಲಿ ಯೋಗಾಸನ ಕಡ್ಡಾಯ. ಎಸ್ ವ್ಯಾಸ್ ಯೋಗ ವಿಶ್ವವಿದ್ಯಾಲಯ ವಿಶ್ವದ ಮೊದಲನೆಯ ಯೋಗ ವಿಶ್ವವಿದ್ಯಾಲಯ’ ಎಂದರು.

‘ಯೋಗ ಯಾವುದೇ ಜನರ ಸ್ವತ್ತಲ್ಲ. ಇದು ವಿಶ್ವದ ಸಾಂಸ್ಕೃತಿಕ ಪರಂಪರೆಯ ಪ್ರತೀಕ. ಋಗ್ವೇದದಲ್ಲಿ ಯೋಗದ ಉಲ್ಲೇಖವಿದೆ. ಜಪಯೋಗ, ಹಠಯೋಗ, ಪ್ರಾಣಾಯಾಮ, ಧ್ಯಾನ, ಸಮಾಧಿ ಹೀಗೆ ಹಲವು ಪ್ರಕಾರದ ಯೋಗ ವಿಧಾನಗಳು ಇವೆ.ಪ್ರತಿನಿತ್ಯ 10 ನಿಮಿಷದ ಪ್ರಾಣಾಯಾಮದಿಂದ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯನ್ನು ದೂರಮಾಡಬಹುದು. ಯೋಗದಿಂದ, ಜನರ ಮಾನಸಿಕ ಶಕ್ತಿಯನ್ನು ಹೆಚ್ಚಿಸಿ, ಬಲಿಷ್ಠ, ಭವ್ಯ ಪ್ರಯೋಗಶೀಲ ಜನರಿಂದ ಉತ್ತಮ ಭಾರತ ನಿರ್ಮಾಣ ಮಾಡಬೇಕು’ ಎಂದು ತಿಳಿಸಿದರು.

ಪರಿಸರ ತಜ್ಞೆ ಎನ್.ನಂದಿನಿ ಮಾತನಾಡಿ, ‘ಇಂದಿನ ಕಲುಷಿತ ವಾತಾವರಣದಿಂದ ಹೊರಬರಲು ನಮಗೆ ಯೋಗ ಸಹಕಾರಿ. ನಾವು ಒಂದು ನಿಮಿಷಕ್ಕೆ 12 ಬಾರಿ ಉಸಿರಾಡುತ್ತೇವೆ. ಆದರೆ ಇಂದು ಉಸಿರಾಡುವ ಗಾಳಿಯೂ ಕಲುಷಿತವಾಗಿದೆ. ಉಸಿರಾಟದ ತೊಂದರೆ ಅನುಭವಿಸುತ್ತಿರುವ ಜನರಿಗೆ ಯೋಗ ಹಾಗೂ ಪ್ರಾಣಾಯಾಮ ಮಾಡುವಂತೆ ಸಲಹೆ ನೀಡಿದ ಬಳಿಕ ಅವರ ಸಮಸ್ಯೆಗಳು ಬಹುತೇಕ ನಿವಾರಣೆಯಾಗಿದೆ. ಇದರಿಂದ ಯೋಗದ ಮಹತ್ವವನ್ನು ತಿಳಿಯಬೇಕು’ ಎಂದರು.

ಸ್ವಾಗತ ಸಮಿತಿಯ ಅಧ್ಯಕ್ಷ ಎಂ.ಸಿ.ನರೇಂದ್ರ, ಕಾರ್ಯಾಧ್ಯಕ್ಷ ಸಿ. ಜಯರಾಜ್, ಕಾರ್ಯಕ್ರಮದ ಪ್ರಾಯೋಜಕ ವಿವೇಕ್ ಏಜೆನ್ಸಿಯ ಮಾಲೀಕರಾದ ಜೆ.ಸತೀಶ್‌ ಇದ್ದರು. ಯೋಗ ಗುರುಗಳಾದ ಆನಂದ್ ಪರಿಚಯ ಬಾಷಣ ಮಾಡಿದರು. ಸಮಿತಿಯ ಮುಖ್ಯ ಶಿಕ್ಷಕ ನಾಗರಾಜ್ ವರದಿ ಓದಿದರು. ಮಹೇಶ್ ಕಾರ್ಯಕ್ರಮ ನಿರೂಪಿಸಿದರು. ಊರಿನ ಪ್ರಮುಖ ಬೀದಿಗಳಲ್ಲಿ ಯೋಗ ನಡಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT