ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ, ಮೇಕೆ ಕಳವು ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆ

Published 21 ಜನವರಿ 2024, 4:27 IST
Last Updated 21 ಜನವರಿ 2024, 4:27 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ಕುಂಟನಹಳ್ಳಿ, ಬೋಕೀಪುರ ಗ್ರಾಮಗಳಲ್ಲಿ ಭಾನುವಾರ ಬೆಳಗಿನ ಜಾವ 3 ಗಂಟೆಗೆ ಕಳ್ಳರು 23 ಕುರಿ,ಮೇಕೆ ಹೊತ್ತು ಒಯ್ದಿದ್ದಾರೆ.

ಸರಕು ಸಾಗಾಣಿಕೆ ವಾಹನದಲ್ಲಿ ಬಂದಿರುವ ಕಳ್ಳರು ಕುಂಟನಹಳ್ಳಿ ಗ್ರಾಮದ ಮಧ್ಯಭಾಗದಲ್ಲಿರುವ ಆನಂದಮ್ಮ ಚನ್ನಕೇಶವ ಅವರ ಕೊಟ್ಟಿಗೆಯಲ್ಲಿದ್ದ 15 ಕುರಿಗಳನ್ನು ವಾಹನದಲ್ಲಿ ತುಂಬಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಾಹನದ ನಂಬರ್ ಪ್ಲೇಟ್ ಕಾಣದಂತೆ ಬಟ್ಟೆ ಸುತ್ತಲಾಗಿದೆ.

ಬೋಕಿಪುರ ಗ್ರಾಮದ ನಾಗರಾಜ್, ಭರತ್ ಅವರ ಕುರಿ,ಮೇಕೆಗಳನ್ನು ಕಳವು ಮಾಡಲಾಗಿದೆ.

2023ರಲ್ಲೂ ಕುರಿ,ಮೇಕೆ, ದನಗಳ ಕಳವು ಮಿತಿ ಮೀರಿತ್ತು. ಕಳ್ಳರ ಹಾವಳಿಗೆ ಬೇಸತ್ತ ರೈತರು ಕುರಿ,ಮೇಕೆಗಳೊಂದಿಗೆ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆಯನ್ನೂ ನಡೆಸಿದ್ದರು. ಕಳ್ಳರು ಮಾತ್ರ ಪತ್ತೆಯಾಗಿರಲಿಲ್ಲ. ಈಗ ಮತ್ತೆ ಕುರಿ, ಮೇಕೆ ಕಳವು ಶುರುವಾಗಿದೆ.

ಈ ತಿಂಗಳಲ್ಲಿ ಇದು ಎರಡನೇ ಕಳವು ಪ್ರಕರಣವಾಗಿದೆ.

ಕಳವು ನಡೆದಿರುವ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT