ಗುರುವಾರ , ಜೂನ್ 24, 2021
29 °C

ಸೂಲಿಬೆಲೆ: ಹೂ ಬೆಳೆ ನಷ್ಟ ಪರಿಹಾರ; ಅಂತಿಮ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂಲಿಬೆಲೆ: ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಕೋವಿಡ್-19ರ ಪ್ರಯುಕ್ತ ನಷ್ಟಕ್ಕೊಳಗಾದ ಹೂ ಬೆಳೆಗಾರರಿಗೆ ಪರಿಹಾರವನ್ನು ಸರ್ಕಾರ ಈಗಾಗಲೇ ಘೋಷಣೆ ಮಾಡಿದ್ದು, 2019-20ನೇ ಬೆಳೆ ಸಮೀಕ್ಷೆಯಲ್ಲಿರುವ ರೈತರಿಗೆ ಡಿಬಿಟಿ ಮುಖಾಂತರ ಪರಿಹಾರವನ್ನು ವಿತರಿಸಲಾಗುತ್ತಿದೆ.

ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂದವರು ದಾಖಲಾತಿಗಳನ್ನು ಸಲ್ಲಿಸದ ಕಾರಣ ಪರಿಹಾರ ವಿತರಿಸಲು ಕಷ್ಟವಾಗುತ್ತಿದ್ದು, ಇದು ಪರಿಹಾರ ಪಡೆಯಲು ಅಂತಿಮ ಅವಕಾಶವಾಗಿದೆ. ರೈತರು ಆಗಸ್ಟ್ 19ರ ಒಳಗೆ ಕಚೇರಿಗೆ ದಾಖಲಾತಿಗಳನ್ನು ಸಲ್ಲಿಸಿ ಹೂ ಬೆಳೆ ನಷ್ಟ ಪರಿಹಾರವನ್ನು ಪಡೆಯಬೇಕು ಎಂದು ಹಿರಿಯ ತೋಟಗಾರಿಕೆ ನಿರ್ದೇಶಕ ಪ್ರಶಾಂತ್‌ ಆರ್‌. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಹಣಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ದಾಖಲೆಗಳನ್ನು ತಾಲ್ಲೂಕು ತೋಟಗಾರಿಕೆ ಕಚೇರಿ ಅಥವಾ ಸಂಬಂಧಪಟ್ಟ ಹೋಬಳಿ ಅಧಿಕಾರಿಗಳಿಗೆ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗೆ ಸಹಾಯಕ ತೋಟಗಾರಿಕಾ ನಿರ್ದೇಶಕ ಸೋಮಶೇಖರ್ ಗೌಡ (ಮೊ. 9483478162, 7996881865, 8722117133) ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.