ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌-ಕಾಂಗ್ರೆಸ್‌ನಲ್ಲಿ ಮುಗಿಯದ ಗೊಂದಲ

ಟಿಎಪಿಎಂಸಿಎಸ್‌ ಚುನಾವಣೆ: ಬಿಜೆಪಿ ಆಕಾಂಕ್ಷಿಗಳ ಪಟ್ಟಿ ಬಿಡುಗಡೆ:
Last Updated 28 ಅಕ್ಟೋಬರ್ 2020, 4:58 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಎಂಸಿಎಸ್‌) ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಒಂದು ದಿನ ಮೊದಲೇ ಬಿಜೆಪಿ ಬೆಂಬಲಿತ ಎಲ್ಲ 13 ಕ್ಷೇತ್ರದ ಆಕ್ಷಾಂಕಿಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಬಿಜೆಪಿ ತಾಲ್ಲೂಕು ವಕ್ತಾರ ನಾಗರಾಜು ಅವರು ನೀಡಿರುವ ಆಕ್ಷಾಂಕಿಗಳ ಪಟ್ಟಿಯಂತೆ ‘ಎ’ ತರಗತಿಯಿಂದ ವೇಣುಕುಮಾರ್, ಜೆ.ವೈ.ಮಲ್ಲಪ್ಪ, ಶ್ರೀನಿವಾಸ್. ‘ಬಿ’ ತಗತಿಯ ಸಾಮಾನ್ಯ ಸ್ಥಾನಕ್ಕೆ ಟಿ.ವಿ.ಲಕ್ಷ್ಮೀನಾರಾಯಣ್‌, ಬಿ.ಸಿ.ನಾರಾಯಣಸ್ವಾಮಿ, ಅಶ್ವತ್ಥನಾರಾಯಣಶೆಟ್ಟಿ, ಮಹಿಳಾ ಮೀಸಲು ಸ್ಥಾನಕ್ಕೆ ತುಂಗಭದ್ರಾ ಆರ್‌.ಚಿದಾನಂದ, ಉಮಾದೇವಿ ಆಲಹಳ್ಳಿ ಬಿಸಿಎಂ ‘ಎ’ ಮೀಸಲು ಸ್ಥಾನಕ್ಕೆ ಪ್ರಕಾಶ್‌ಕುಮಾರ್‌, ಚಂದ್ರಶೇಖರ್ ಆಲಹಳ್ಳಿ, ಟಿ.ಜಿ.ಮಂಜುನಾಥ್, ಬಿಸಿಎಂ ‘ಬಿ’ ಮೀಸಲು ಸ್ಥಾನಕ್ಕೆ ಆನಂದ್‌ಕುಮಾರ್, ಎಸ್ಸಿ ಮೀಸಲು ಸ್ಥಾನಕ್ಕೆ ಗೋಪಾಲ್‌ನಾಯಕ್, ಎಸ್ಟಿ ಮೀಸಲು ಸ್ಥಾನಕ್ಕೆ ಪ್ರೇಮ್‌ಕುಮಾರ್.

ಅಂತಿಮಗೊಳ್ಳದ ಕಾಂಗ್ರೆಸ್-ಜೆಡಿಎಸ್‌ ಪಟ್ಟಿ: ಜೆಡಿಎಸ್‌ ಹೈಕಮಾಂಡ್‌ ಯಾರು ಎನ್ನುವುದೇ ದೊಡ್ಡ ಗೊಂದಲವಾಗಿದ್ದು, ಟಿಎಪಿಎಂಸಿಎಸ್‌ ಚುನಾವಣೆಗೆ ಎರಡು ಬಣಗಳಾಗಿ ನಾಮಪತ್ರಸಲ್ಲಿಸಲು ಸಿದ್ಧತೆ ನಡೆದಿದೆ. ಟಿಎಪಿಎಂಸಿಎಸ್‌ ಚುನಾವಣ ಹಿನ್ನೆಲೆಯಲ್ಲಿ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ ಅವರ ಅಧ್ಯಕ್ಷತೆಯಲ್ಲಿ ಆಕಾಂಕ್ಷಿಗಳ ಸಭೆ ನಡೆದಾಗಲೂ ಬಹುತೇಕ ಜನ ಆಕಾಂಕ್ಷಿಗಳು ಸಭೆಗೆ ಗೈರು ಹಾಜರಾಗಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ಅಪ್ಪಯ್ಯ ಅವರ ಮುಖಂಡತ್ವದಲ್ಲಿ 13 ಸ್ಥಾನಗಳಿಗೂ ನಾಮಪತ್ರ ಸಲ್ಲಿಸಲು ಸಿದ್ಧತೆ ಆರಂಭಗೊಂಡಿದೆ.

ಕಾಂಗ್ರೆಸ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು ಎರಡು ಬಾರಿ ಸಭೆ ನಡೆಸಿದ್ದರೂ ಇನ್ನೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ನಾಮಪತ್ರ ಸಲ್ಲಿಸುವ ಕೊನೆ ಸಮಯದವರೆಗೂ ಕಾದುನೋಡುವ ತಂತ್ರವನ್ನು ಕಾಂಗ್ರೆಸ್‌ ಮುಖಂಡರು ಅನುಸರಿಸುತ್ತಿದ್ದಾರೆ. ಆದರೆ, ಈಗಾಗಲೇ ಕೆಲ ಆಕಾಂಕ್ಷಿಗಳು ಪ್ರಚಾರವನ್ನೇ ಆರಂಭಿಸಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಪಕ್ಷದಲ್ಲೂ ಹೈಕಮಾಂಡ್‌ ಹಿಡಿತ ಸಡಿಲವಾಗಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT