ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಂಬಾಕು ರಹಿತ ಸಮಾಜ ನಿರ್ಮಿಸಿ’

ಶ್ರೀರಾಮ ಆರೋಗ್ಯ ಸೇವೆ ಹಾಗೂ ತರಬೇತಿ ಕೇಂದ್ರದಲ್ಲಿ ಕಾರ್ಯಕ್ರಮ
Last Updated 1 ಜೂನ್ 2019, 13:24 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಯುವಜನತೆ ತಂಬಾಕಿನಿಂದ ಉಂಟಾಗುವ ದುಷ್ಪರಿಣಾಮಗಳಿಂದ ಪಶ್ಚಾತ್ತಾಪ ಪಡುವ ಮುನ್ನ ಮುಂಜಾಗ್ರತೆ ವಹಿಸಬೇಕು ಎಂದು ಬಿಜೆಪಿ ಮುಖಂಡ ಎಚ್.ಎಸ್. ಅಶ್ವತ್ಥನಾರಾಯಣಕುಮಾರ್ ಹೇಳಿದರು.

ನಗರದ ಶ್ರೀರಾಮ ಆರೋಗ್ಯ ಸೇವೆ ಹಾಗೂ ತರಬೇತಿ ಕೇಂದ್ರದಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಂಬಾಕು ಸೇವೆನೆಯಿಂದ ಕ್ಯಾನ್ಸರ್ ಸೇರಿದಂತೆ ಹಲವಾರು ರೋಗಗಳು ಬರುತ್ತವೆ. ಇದರ ದುಷ್ಪರಿಣಾಮಗಳ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಿದಾಗ ಮಾತ್ರ ತಂಬಾಕು ವ್ಯಸನವನ್ನು ದೂರ ಮಾಡಿ ತಂಬಾಕು ರಹಿತ ಸಮಾಜ ಕಟ್ಟಲು ಸಾಧ್ಯ ಎಂದರು.

ಶ್ರೀರಾಮ ಆಸ್ಪತ್ರೆಯ ನಿರ್ದೇಶಕ ಡಾ.ಎಚ್.ಜಿ. ವಿಜಯಕುಮಾರ್ ಮಾತನಾಡಿ, ತಂಬಾಕು ಸೇವನೆ ವಿಶ್ವದ ಸಮಸ್ಯೆಯಾಗಿದೆ. ಭಾರತ ದೇಶದಲ್ಲಿ ಶೇ35 ರಷ್ಟು ಧೂಮಪಾನ ವ್ಯಸನಿಗಳು, ಶೇ15ರಷ್ಟು ವಿವಿಧ ರೂಪದಲ್ಲಿ ತಂಬಾಕು ವ್ಯಸನಿಗಳಿದ್ದಾರೆ ಎಂದು ಅಂಕಿ ಅಂಶ ಹೇಳುತ್ತಿದೆ ಎಂದರು.

ಆಧುನಿಕತೆ ಹೆಚ್ಚಾದಂತೆ ತಂಬಾಕು ಸೇವನೆ ಹೆಚ್ಚಾಗುತ್ತಿದೆ. ಕದ್ದುಮುಚ್ಚಿ ಮಾಡುತ್ತಿದ್ದ ಕಾರ್ಯ ಬಹಿರಂಗವಾಗಿದೆ. ತಂಬಾಕು ಸೇವನೆ ಪ್ರತಿಷ್ಠೆ ಎನ್ನುವಂತಾಗಿರುವುದು ಆತಂಕಕಾರಿ ವಿಷಯವಾಗಿದೆ. ಈಚೆಗೆ ಪುರುಷರಿಗೆ ಸಮನಾಗಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದರೂ ತಂಬಾಕು ವ್ಯಸನಿಗಳಾಗುತ್ತಿರುವುದು ಆತಂಕದ ವಿಷಯ ಎಂದರು.

ಬಾಯಿ ಕ್ಯಾನ್ಸರ್, ಹೃದಯ ಕ್ಯಾನ್ಸರ್, ಸಂತಾನ ಭಾಗ್ಯ ಇಲ್ಲದಂತಾಗುತ್ತಿರುವಂತ ದುಷ್ಪರಿಣಾಮಗಳು ಹೆಚ್ಚಾಗುತ್ತಿದ್ದರೂ ಅರಿವಿನ ಕೊರತೆ ಕಾಡುತ್ತಿದೆ. ಕಿದ್ವಾಯಿ ಆಸ್ಪತ್ರೆಗೆ ಪ್ರತಿ ದಿನ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ 1,800 ಜನ ದಾಖಲಾಗುತ್ತಿದ್ದು ಇವರಲ್ಲಿ 800 ರಿಂದ 900 ಮಂದಿ ತಂಬಾಕು ಸೇವನೆ ಮಾಡುವವರಾಗಿದ್ದಾರೆ. ತಂಬಾಕು ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಬೇಕಿದೆ ಎಂದರು.

ಮುಖಂಡರಾದ ವರದನಹಳ್ಳಿ ನಾರಾಯಣಸ್ವಾಮಿ, ಗುಂಡಮಗೆರೆ ಎಂಪಿಸಿಎಸ್ ಕಾರ್ಯದರ್ಶಿ ರಮಾನಂದಸ್ವಾಮಿ, ಅನಿಕೇತನ ಟ್ರಸ್ಟ್‌ ಕಾರ್ಯದರ್ಶಿ ಡಿ.ಶ್ರೀಕಾಂತ ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT