ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯದ ಇಫ್ತಾರ್‌ ಕೂಟ

ದೇವನಹಳ್ಳಿಯ ಅಮಿನ ಮಸೀದಿಯಲ್ಲಿ ಎಲ್ಲ ಜನಾಂಗದವರು ಭಾಗಿ
Published 21 ಮಾರ್ಚ್ 2024, 5:25 IST
Last Updated 21 ಮಾರ್ಚ್ 2024, 5:25 IST
ಅಕ್ಷರ ಗಾತ್ರ

ದೇವನಹಳ್ಳಿ: ಸಾಮರಸ್ಯದ ತತ್ವದಡಿಯಲ್ಲಿ ಪಟ್ಟಣದ ಕದ್ದೂಸ್‌ ಬಡಾವಣೆಯಲ್ಲಿರುವ ಅಮಿನ ಮಸೀದಿಯಲ್ಲಿ ರಂಜಾನ್‌ ಮಾಸದ ಪ್ರಯುಕ್ತ ಇಫ್ತಾರ್‌ ಕೂಟವನ್ನು ಎಲ್ಲ ಧರ್ಮದ ಜನರಿಗೆ ಮಂಗಳವಾರ ಏರ್ಪಡಿಸಲಾಗಿತ್ತು.

ಇಫ್ತಾರ್ ಕೂಟಕ್ಕೆ ಚಾಲನೆ ನೀಡಿದ ಮಸೀದಿಯ ಅಧ್ಯಕ್ಷ ಕುದ್ದೂಸ್‌ ಪಾಷ ಮಾತನಾಡಿ,  ರಂಜಾನ್‌ ಹಬ್ಬವು ಬಹಳ ಪವಿತ್ರದಿಂದ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗಿದೆ. ನೆರೆಹೊರೆಯವರೆಲ್ಲರೂ ಒಗ್ಗೂಡಿ ಯಾವುದೇ ಭೇದಭಾವವಿಲ್ಲದೆ ಕಾರ್ಯಕ್ರಮವನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.

ಮುಸ್ಲಿಂ ಮಹಿಳೆಯರು ಇಲ್ಲಿನ ಅಮೀನ ಮಸೀದಿಯಲ್ಲಿ ಪ್ರಾರ್ಥನೆಗೆ ಬರುತ್ತಿದ್ದು, ಜತೆಗೆ ಅನ್ಯಧರ್ಮಿಯರು ಸಹ ಇಫ್ತಾರ್‌ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ಸಾಮೂಹಿಕ ಇಫ್ತಾರ್‌ ಕೂಟದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಲ್ಲಿನ ಆವತಿ ಮಸೀದಿ, ಜಾಮೀಯ ಅಹಲೇ ಅಹದೀಸ್‌ ಮಸೀದಿ ಮತ್ತು ವಿನಾಯಕ ನಗರದ ಮಸೀದಿಯಲ್ಲಿಯೂ ಸಹ ಇಫ್ತಾರ್‌ ಏರ್ಪಡಿಸಲಾಗಿತ್ತು.

ಉಪನ್ಯಾಸಕ ಡಾ.ಶಫೀಕ್‌ ಅಹಮದ್, ಮಸೀದಿ ಕಾರ್ಯದರ್ಶಿ ಎ.ಎಸ್‌.ಇಬ್ರಾಹಿಂ, ಮಸೀದಿ ಇಮಾಮ್‌ ನದೀಮ್, ಬಾಬು, ಸೈಯದ್‌ಬಾಬು, ಪತ್ರಕರ್ತ ಹೈದರ್‌ಸಾಬ್, ಆರೀಫ್, ಅರ್ಷದ್, ಜಬೀವುಲ್ಲಾ, ಮೌಲ, ರಹಮತ್, ನಜೀರ್, ನಾಸೀರ್, ಜಮಾಯತ್‌ನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT