ವಿಜಯಪುರ (ದೇವನಹಳ್ಳಿ): ವಿಪ್ ಉಲ್ಲಂಘಿಸಿದ ವಿಜಯಪುರ ಪಟ್ಟಣದ ಪುರಸಭೆಯ ಏಳು ಮಂದಿ ಜೆಡಿಎಸ್ ಸದಸ್ಯರನ್ನು ವರ್ಗಾವಣೆಗೊಂಡ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರು ಸದಸ್ಯತ್ವ ಅರ್ನಹಗೊಳಿಸಿ ಗುರುವಾರ ತಡರಾತ್ರಿ ಆದೇಶ ಹೊರಡಿಸಿದ್ದಾರೆ.

ವಿಜಯಪುರ ಪಟ್ಟಣದ ಜೆಡಿಎಸ್ ಟೌನ್ ಅಧ್ಯಕ್ಷ ಹಾಗೂ ಪುರಸಭೆ 1ನೇ ವಾರ್ಡಿನ ಸದಸ್ಯ ಸಿ.ನಾರಾಯಣಸ್ವಾಮಿ, ಪುರಸಭೆ ಹಾಲಿ ಉಪಾಧ್ಯಕ್ಷೆ, 15 ನೇ ವಾರ್ಡಿನ ಸದಸ್ಯೆಯಾಗಿದ್ದ ತಾಜುನ್ನಿಸಾ ಮೆಹಬೂಬ್ ಪಾಷಾ, 17 ನೇ ವಾರ್ಡಿನ ಬೈರೇಗೌಡ, 19 ನೇ ವಾರ್ಡಿನ ರವಿ, 2ನೇ ವಾರ್ಡಿನ ಸದಸ್ಯೆ ರಾಜೇಶ್ವರಿ ಭಾಸ್ಕರ್, 13 ನೇ ವಾರ್ಡಿನ ಕವಿತಾ, 14ನೇ ವಾರ್ಡಿನ ರಾಧಮ್ಮ ಪ್ರಕಾಶ್ ಅನರ್ಹಗೊಂಡ ಪುರಸಭೆ ಸದಸ್ಯರು.

2025 ಮಾರ್ಚ್ 10 ರಂದು ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ನ 07 ಮಂದಿ ಪುರಸಭಾ ಸದಸ್ಯರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಮತ ಚಲಾಯಿಸಿದ್ದರು. ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ಗೆ, ಉಪಾಧ್ಯಕ್ಷ ಸ್ಥಾನವನ್ನು ಜೆಡಿಎಸ್ಗೆ ಅಧಿಕಾರ ಹಂಚಿಕೊಂಡಿದ್ದರು.

ಪಕ್ಷದ ನಿರ್ದೇಶನ (ವಿಪ್) ಉಲ್ಲಂಘಿಸಿದ 07 ಮಂದಿ ಸದಸ್ಯರ ವಿರುದ್ಧ ಅಂದಿನ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಮುನೇಗೌಡ ಅವರು 2025 ಮಾರ್ಚ್ 27 ರಂದು ಪುರಸಭಾ ಮುಖ್ಯಾಧಿಕಾರಿಗೆ ದೂರು ಸಲ್ಲಿಸಿದ್ದರು. ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳ ನ್ಯಾಯಾಲಯವು, `ಕರ್ನಾಟಕ ಸ್ಥಳೀಯ ಸಂಸ್ಥೆಗಳ ಪಕ್ಷಾಂತರ ನಿಷೇಧ ಕಾಯ್ದೆ'ಯಡಿ ಫೆಬ್ರವರಿ 26 ರಂದು ಇವರ ಸದಸ್ಯತ್ವವನ್ನು ರದ್ದುಗೊಳಿಸಿ ತೀರ್ಪು ನೀಡಿದೆ.

2021 ರಲ್ಲಿ ಕೇವಲ ಒಂದು ಸ್ಥಾನದಲ್ಲಿದ್ದ ಜೆಡಿಎಸ್ ಪಕ್ಷವನ್ನು ನಾವು 13 ಸ್ಥಾನಕ್ಕೆ ಬೆಳೆಸಿದ್ದೇವೆ. ಅಂದಿನ ಜಿಲ್ಲಾಧ್ಯಕ್ಷರಿಗೆ ವಾಸ್ತವ ತಿಳಿದಿದ್ದರೂ ಕೆಲವು `ಬ್ಲಾಕ್ ಮೇಲ್' ಕಾರ್ಯಕರ್ತರ ಒತ್ತಡಕ್ಕೆ ಮಣಿದು ದೂರು ನೀಡಿದ್ದರು. ಮುಂದಿನ ದಿನಗಳಲ್ಲಿ ಜನರೇ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ

-ಸಿ.ನಾರಾಯಣಸ್ವಾಮಿ ಅನರ್ಹ ಸದಸ್ಯ

ಜೆಡಿಎಸ್ ಪಕ್ಷದ ಚಿಹ್ನೆಯ ಮೇಲೆ ಗೆದ್ದು ಪಕ್ಷಕ್ಕೆ ದ್ರೋಹ ಮಾಡಿದವರಿಗೆ ತಕ್ಕ ಶಾಸ್ತಿಯಾಗಿದೆ. ಪಕ್ಷದ ಶಿಸ್ತನ್ನು ಕಾಪಾಡದ ಸಿದ್ಧಾಂತಗಳಿಗೆ ಬದ್ಧರಾಗಿರದ ಸದಸ್ಯರ ಸದಸ್ಯತ್ವ ವಜಾಗೊಳಿಸಿರುವ ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆ ಬಾಗಬೇಕು. ಸತ್ಯಕ್ಕೆ ಜಯ ಸಿಕ್ಕಿದೆ

-ಸಿ.ಎಂ.ರಾಮ ಜೆಡಿಎಸ್ ಸದಸ್ಯ ಪುರಸಭೆ

ನಾವು ಪಕ್ಷ ವಿರೋಧಿಗಳಲ್ಲ....

‘ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರು ನಾವು. ಪಟ್ಟಣದಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಿದ್ದೇವೆ. ಇದರ ಪರಿಣಾಮ ಕಳೆದ ಪುರಸಭೆ ಚುನಾವಣೆಯಲ್ಲಿ 13 ಮಂದಿ ಜೆಡಿಎಸ್ ಸದಸ್ಯರು ಆಯ್ಕೆಗೊಂಡಿದ್ದಾರೆ. ಮೊದಲ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಸದಸ್ಯರನ್ನು ಆಯ್ಕೆ ಮಾಡಿದ್ದೇವೆ. ಆಯ್ಕೆಗೊಂಡವರೆ ಎರಡನೇ ಅವಧಿಗೆ ಪುನಃ ಅಧ್ಯಕ್ಷರ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು. ಅವರ ಆಡಳಿತ ಅವ್ಯವಸ್ಥೆಗೆ ಕಾರಣವಾಗಿ ಸದಸ್ಯರು ಒಮ್ಮತಕ್ಕೆ ಬಾರದ ಕಾರಣ ಈ ನಿರ್ಧಾರ ಕೈಗೊಳ್ಳಲಾಯಿತು’ ಎಂದು ಅನರ್ಹ ಪುರಸಭೆ ಸದಸ್ಯ ಬೈರೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.