ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಪಾಸ್‌ ಪೋರ್ಟ್‌: ಪ್ರಯಾಣಿಕನ ಬಂಧನ

Published 14 ಮಾರ್ಚ್ 2024, 16:10 IST
Last Updated 14 ಮಾರ್ಚ್ 2024, 16:10 IST
ಅಕ್ಷರ ಗಾತ್ರ

ದೇವನಹಳ್ಳಿ: ನಕಲಿ ಪಾಸ್‌ಪೋರ್ಟ್‌ ಮೂಲಕ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿ ಮಾರ್ಗವಾಗಿ ಖಜಿಕಿಸ್ತಾನಿನ ಅಲ್ಮೇಟಿಗೆ ಪ್ರಯಾಣಿಸಲು ಆಗಮಿಸಿದ್ದ ಪ್ರಯಾಣಿಕನನ್ನು ಇಂಡಿಗೋ ಏರ್‌ಲೈನ್ಸ್‌ ಸಿಬ್ಬಂದಿ ಪತ್ತೆ ಹಚ್ಚಿದ್ದು, ಆತನನ್ನು ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.

ಶ್ರೇಯಸ್‌ ರಮಾನಂದ ಬಂಧಿತ ಆರೋಪಿ.

ಆರೋಪಿ ಫೆ.12ರಂದು ಅಲ್ಮೇಟಿಗೆ ಪ್ರಯಾಣಿಸಲು ಬಂದಿದ್ದ ಆರೋಪಿಯು ಪಾಸ್‌ಪೋರ್ಟ್‌ ಪರಿಶೀಲಿಸಿದ ವೇಳೆ ದಾಖಲೆಯಲ್ಲಿರುವ ಭಾವಚಿತ್ರ ಹಾಗೂ ಆತನಿಗೆ ಹೋಲಿಕೆ ಆಗದ ಕಾರಣ ಅನುಮಾನಗೊಂಡು ವಿಮಾನ ಸಿಬ್ಬಂದಿಯೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆರೋಪಿಯು ರಮಾನಂದ ಮತಿಗೋಡು ಸತ್ಯನಾರಾಯಣ ಎಂಬುವವರ ಪಾಸ್‌ಪೋರ್ಟ್‌ ಬಳಸಿಕೊಂಡು ವಿದೇಶಕ್ಕೆ ಹೋಗಲು ಯತ್ನಿಸಿದ್ದ ಎಂದು ಪರಿಶೀಲನೆ ವೇಳೆ ತಿಳಿದು ಬಂದಿದೆ.

ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT