ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಕೃಷ್ಣ ಜನ್ಮಾಷ್ಟಮಿ ಸಡಗರ

ಕಲಾ ತಂಡದೊಂದಿಗೆ ವೇಣುಗೋಪಾಲಸ್ವಾಮಿ ಉತ್ಸವ
Last Updated 22 ಆಗಸ್ಟ್ 2022, 3:54 IST
ಅಕ್ಷರ ಗಾತ್ರ

ದೇವನಹಳ್ಳಿ: ಪಟ್ಟಣದ ರಾಜ ಬೀದಿಗಳಲ್ಲಿ ಭಾನುವಾರ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಾಲ್ಲೂಕು ಯಾದವ ಸಂಘದಿಂದ ಆಯೋಜಿಸಿದ್ದ ವೇಣುಗೋಪಾಲ ಸ್ವಾಮಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಪ್ರತಿ ವರ್ಷ ರೋಹಿಣಿ ನಕ್ಷತ್ರದಲ್ಲಿ ಜನ್ಮಾಷ್ಟಮಿ ಆಚರಣೆ ಮಾಡಿಕೊಂಡು ಬರುತ್ತಿರುವುದು ದೇವನಹಳ್ಳಿಯಲ್ಲಿ ಪ್ರತೀತಿಯಾಗಿದೆ.

ಶನಿವಾರ ರಾತ್ರಿಯಿಂದಲೂ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಯಾದವ ಸಮುದಾಯದ ಜನತೆ ಐತಿಹಾಸಿಕ ವೇಣುಗೋಪಾಲ ಸ್ವಾಮಿ ದೇಗುಲದಲ್ಲಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ, ಭಾನುವಾರ ಮುಂಜಾನೆ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಯಿತು.

ವಿವಿಧ ಹೂವುಗಳಿಂದ ಅಲಂಕೃತ
ರಾದ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಮೆರವಣಿಗೆಯಲ್ಲಿ ಗೋವುಗಳು, ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಪ್ರಕಾರದ ಕಲಾವಿದರು ಉತ್ಸವಕ್ಕೆ ಮೆರಗು ತಂದರು.

ಸರ್ವ ಅಲಂಕಾರ ಭೂಷಿತನಾಗಿ ವಿವಿಧ ಆಭರಣಗಳೊಂದಿಗೆ ಶ್ರೀ ದೇವಿ, ಭೂದೇವಿ ಸೇಮತ ವೇಣುಗೋಪಾಲ ಸ್ವಾಮಿಯ ಉತ್ಸವ ಮೂರ್ತಿಯನ್ನು ಕಂಡು ಭಕ್ತರು ಪುನೀತಾರಾದರು. ಬೆಳಿಗಿನಿಂದಲೇ ಭಕ್ತರು ದೇವಾಲಯಕ್ಕೆ ಬಂದು ದರ್ಶನ ಪಡೆಯುತ್ತಿರುವುದು ಸಾಮಾನ್ಯವಾಗಿತ್ತು.

ದೇಗುಲದ ಹೆಬ್ಬಾಗಿಲ ಬಳಿ ಇರಿಸಲಾಗಿದ್ದ 1970ನೇ ಇಸವಿಯ ಶ್ರೀ ಕೃಷ್ಣಜನ್ಮಾಷ್ಟಮಿಯ ಪೋಟೋವೂ ಸ್ಥಳೀಯರ ಗಮನ ಸೆಳೆಯಿತು.

ಕಾಂಗ್ರೆಸ್‌ ಮುಖಂಡ ಹಾಗೂ ಸಮಾಜಸೇವಕ ಶೆಟ್ಟಿಗೆರೆ ಎಂ.ರಾಜಣ್ಣ, ಯಾದವ ಸಂಘದ ತಾಲ್ಲೂಕು ಉಪಾಧ್ಯಕ್ಷ ಜಿಂಕಲಾ ವಿ.ಮುನಿರಾಜು, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ಖಜಾಂಚಿ ಬಿ.ಎಲ‌.ಶ್ರೀಧರ್‌ ಮೂರ್ತಿ, ಸಹಕಾರ್ಯದರ್ಶಿ ಆನಂದ‌, ಸಂಘಟನಾ
ಕಾರ್ಯದರ್ಶಿ ಎನ‌.ವೆಂಕಟೇಶ‌, ಪುರ
ಸಭಾ ಸದಸ್ಯ ಬಾಂಬೆ ನಾರಾಯಣ
ಸ್ವಾಮಿ, ಮಾಜಿ ಪುರಸಭಾ ಸ್ಥಾಯಿ ಸಮಿತಿ ಅದ್ಯಕ್ಷ ವಿ.ಗೋಪಾಲ‌, ಮಾಜಿ ಪುರ
ಸಭಾ ಸದಸ್ಯ ಸೋಮಣ್ಣ, ಯುವಕಾಂಗ್ರೆಸ್‌
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಖಂಡ
ರಾದ ಎಂ.ಆನಂದ್, ಸುಮಂತ‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT