ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಜಾರಿಗೆ ಬಂದ ಸಂಚಾರ ನಿಯಮ

ದೊಡ್ಡಬಳ್ಳಾಪುರ: ಏಕಮುಖ ಸಂಚಾರ, ವ್ಯವಸ್ಥಿತ ಬೈಕ್‌ ನಿಲುಗಡೆ
Published 16 ನವೆಂಬರ್ 2023, 7:41 IST
Last Updated 16 ನವೆಂಬರ್ 2023, 7:41 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿ ಚರಂಡಿ ಕಾಮಗಾರಿಗಳು ಸೇರಿದಂತೆ ವಿವಿಧ ಕಾರಣಗಳಿಂದ ಐದಾರು ವರ್ಷಗಳಿಂದ ಸ್ಥಗಿತವಾಗಿದ್ದ, ಏಕಮುಖ ಸಂಚಾರ ಹಾಗೂ ರಸ್ತೆಯ ಒಂದೊಂದು ಬದಿಯಲ್ಲಿ ಒಂದು ದಿನ ಮಾತ್ರ ಬೈಕ್‌ಗಳ ನಿಲುಗಡೆ ವ್ಯವಸ್ಥೆಯನ್ನು ಬುಧವಾರ ದಿಂದ ಜಾರಿಗೆ ತರಲಾಗಿದೆ ಎಂದು ನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಅಮರೇಶ್‌ಗೌಡ ಹೇಳಿದರು.

ಈ ಕುರಿತು ಮಾಹಿತಿ ನೀಡಿದ ಅವರು, ನಗರದಲ್ಲಿನ ರಸ್ತೆಗಳು ಅತ್ಯಂತ ಕಿರಿದಾಗಿವೆ. ಹೀಗಾಗಿ ನಗರದ ಪ್ರಮುಖ ವಾಣಿಜ್ಯ ಚಟುವಟಿಕೆ ನಡೆಯುವ ರಸ್ತೆಗಳ ಎರಡೂ ಬದಿಯಲ್ಲೂ ಬೈಕ್‌ ನಿಲ್ಲಿಸುವಂತೆ ಇಲ್ಲ. ಒಂದು ಬದಿಯಲ್ಲಿ ಮಾತ್ರ ಬೈಕ್‌ ನಿಲುಗಡೆ ಮಾಡಬೇಕು. ಆದರೆ ಪ್ರತಿ ದಿನವು ಒಂದೇ ಬದಿಯಲ್ಲಿ ಬೈಕ್‌ ನಿಲ್ಲಿಸಿದರೆ ವ್ಯಾಪಾರಿಗಳಿಗು ತೊಂದರೆಯಾಗಲಿದೆ. ಹೀಗಾಗಿ ಒಂದೊಂದು ದಿನ ಒಂದು ಬದಿಯಲ್ಲಿ ಮಾತ್ರ ಬೈಕ್‌ ನಿಲುಗಡೆ ಮಾಡಬೇಕು. ನಿಯಮ ಪಾಲಿಸದೆ ಎಲ್ಲೆಂದರಲ್ಲಿ ಬೈಕ್‌ ನಿಲುಗಡೆ ಮಾಡಿದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಏಕ ಮುಖ ಸಂಚಾರದ ರಸ್ತೆಗಳು: ನಗರದ ಪ್ರಮುಖ ವಾಣಿಜ್ಯ ಚಟುವಟಿಕೆ ನಡೆಯುವ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೆ ತರಲಾಗಿದೆ. ಆಟೋ, ಬೈಕ್‌ ಸೇರಿದಂತೆ ಎಲ್ಲಾ ವಾಹನಗಳಿಗೂ ಈ ನಿಮಯ ಅನ್ವಯವಾಗಲಿದೆ. ನಗರದ ಕೊಂಗಾಡಿಯಪ್ಪ ಬಸ್‌ ನಿಲ್ದಾಣದಲ್ಲೂ ಸಹ ಬೈಕ್‌ಗಳ ನಿಲುಗಡೆಗೆ ಸ್ಥಳ ಗುರುತಿಸಿ ಸೂಚನ ಫಲಕ ಅಳವಡಿಸಲಾಗಿದೆ ಎಂದರು.

- ಮಾರ್ಗಸೂಚಿ

ಮುಗುವಾಳಪ್ಪ ವೃತ್ತದಿಂದ ಪ್ರಾರಂಭವಾಗಿ ಚೌಕದ ವೃತ್ತ ಸೌಂದರ್ಯ ಮಹಲ್‌ ವೃತ್ತ ಹಾಗೂ ಗಾಂಧಿ ವೃತ್ತದವರೆಗೆ ಬೈಕ್‌ ಆಟೋ ಕಾರು ಇತರೆ ವಾಹನಗಳು ಹೋಗಬಹುದು. ಆದರೆ ಇದೇ ರಸ್ತೆಯಲ್ಲಿ ಹಿಂದಕ್ಕೆ ಬರುವಂತಿಲ್ಲ. ಬಸ್‌ ನಿಲ್ದಾಣದಿಂದ ಸೌಂದರ್ಯ ಮಹಲ್‌ ವೃತ್ತದ ಕಡೆಗೆ ಬೈಕ್‌ಆಟೋಕಾರುಗಳು ಹೋಗಬಹುದು. ಆದರೆ ಹಿಂದಕ್ಕೆ ಬರುವಂತಿಲ್ಲ. ಡಾ.ರಾಜ್‌ಕುಮಾರ್‌ ವೃತ್ತದಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಕಡೆಗೆ ಬೈಕ್‌ ಆಟೋ ಕಾರು ಬಸ್‌ ಇತರೆ ವಾಹನಗಳು ಹೋಗಬಹುದು. ಆದರೆ ಇದೇ ರಸ್ತೆಯಲ್ಲಿ ಬೈಕ್‌ ಹಾಗೂ ಇತರೆ ವಾಹನಗಳು ಹಿಂದಕ್ಕೆ ಬರುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT