ರೈಲ್ವೆ ನಿಲ್ದಾಣ ಬಸ್ ನಿಲ್ದಾಣಗಳಿಗೆ ಹೊರಗಿನಿಂದ ಬರುವ ಪ್ರಯಾಣಿಕರು ಕೆಲವು ಸಂದರ್ಭಗಳಲ್ಲಿ ಬೆಳಗ್ಗೆ ಸ್ನಾನ ಮಾಡುವ ಅನಿರ್ವಾಯತೆ ಇರುತ್ತದೆ. ಆದರೆ ಇಲ್ಲಿನ ಶೌಚಾಲಯಗಳಲ್ಲಿ ಸ್ವಚ್ಛತೆಯೇ ಇಲ್ಲ. ಶೌಚಕ್ಕೆ ಹೋಗಲು ಅಸಹ್ಯ ಪಟ್ಟಿಕೊಳ್ಳುವಾಗ ಸ್ನಾನ ಮಾಡಲು ಹೇಗೆ ಸಾಧ್ಯ?
–ಪ್ರಕಾಶ್ ಡಿ.ಕ್ರಾಸ್ ನಿವಾಸಿ
ಸ್ವಚ್ಛ ಭಾರತ್ ಯೋಜನೆಯಲ್ಲಿ ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದಿಂದ ಸಾಕಷ್ಟು ಆರ್ಥಿಕ ನೆರವು ಬರುತ್ತಿದೆ. ಆದರೆ ಇದರ ಸದ್ಬಳಕೆ ಮಾಡಿಕೊಂಡು ಹೈಟೆಕ್ ಶೌಚಾಲಯ ಇರುವ ಶೌಚಾಲಯಗಳಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ತುರ್ತು ಅಗತ್ಯವಿದೆ.