ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪ್ರೋತ್ಸಾಹ 

7
ಜಿಲ್ಲಾ ಮಟ್ಟದ ಬಾಲಕರ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಿಗೆ ನಡೆದ ಅಭಿನಂದನೆ

ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಪ್ರೋತ್ಸಾಹ 

Published:
Updated:
Deccan Herald

ದೇವನಹಳ್ಳಿ: ಶಾಲಾ ಕಾಲೇಜುಗಳಲ್ಲಿ ಗುರುತಿಸಿಕೊಳ್ಳುತ್ತಿರುವ ಪ್ರತಿಭಾನ್ವಿತ ಕ್ರೀಡಾ ಪಟುಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚನ್ನಬಸಪ್ಪ ತಿಳಿಸಿದರು.

ತಾಲ್ಲೂಕಿನ ಕುಂದಾಣ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ 2018–19 ಸಾಲಿನ ಜಿಲ್ಲಾ ಮಟ್ಟದ ಬಾಲಕರ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಿಗೆ ನಡೆದ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರ ವಾಜಪೇಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ವಸತಿ ಶಾಲೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರತಿ ಹೋಬಳಿ ಮಟ್ಟದಲ್ಲಿ ಆರಂಭಿಸಿದೆ ಎಂದರು.

ಗುಣಮಟ್ಟದ ಶಿಕ್ಷಣ ಮತ್ತು ಪಠ್ಯೇತರ ಚಟುವಟಿಕೆಯಾದ ಕ್ರೀಡೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಯಾವುದೇ ವಸತಿ ಶಾಲೆ ಕನಿಷ್ಠ 10 ಎಕರೆ ಜಾಗ ಕಡಿಮೆ ಇಲ್ಲದಂತೆ ಕಾಯ್ದಿರಿಸಿ ಕಟ್ಟಡ ನಿರ್ಮಾಣ ಮಾಡಿದೆ. ಮೈದಾನದಲ್ಲಿ ನಿರಂತರ ಕ್ರೀಡಾ ಚಟುವಟಿಕೆ ಇರಬೇಕು ಎಂದರು.

ವಿವಿಧ ಕ್ರೀಡಾ ಅಂಕಣಗಳು ಇದ್ದರೆ ಕ್ರೀಡಾ ಪಟುಗಳಿಗೆ ಆಟದ ಇಚ್ಛಾಸಕ್ತಿ ಹೆಚ್ಚಲಿದೆ. ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಸಮಾಜ ಕಲ್ಯಾಣ ಇಲಾಖೆವತಿಯಿಂದ ಕ್ರೀಡಾ ಪಟುಗಳಿಗೆ ಪ್ರೋತ್ಸಹಧನ ಮತ್ತು ಕ್ರೀಡಾ ಸಮವಸ್ತ್ರಗಳು ಸಿಗಲಿದೆ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳಾಗಬೇಕು ಎಂದರು.

ಛಲವಾದಿ ಮಹಾ ಸಭಾ ತಾಲ್ಲೂಕು ಘಟಕ ಅಧ್ಯಕ್ಷ ಕೆ.ವಿ.ಸ್ವಾಮಿ ಮಾತನಾಡಿ, ಕ್ರೀಡಾಪಟುಗಳಿಗೆ ಸಮಾಜದಲ್ಲಿ ಒಳ್ಳೆಯ ಗೌರವವಿದೆ; ಕ್ರೀಡೆ ಎಂದರೆ ಬರಿ ಕ್ರಿಕೆಟ್ ಆಟವಲ್ಲ. ಗ್ರಾಮೀಣ ಸೊಗಡಿನ ಕ್ರೀಡೆಗಳ ಬಗ್ಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.

ಕ್ರೀಡಾಪಟುಗಳ ಕೊರತೆ ಇಲ್ಲ. ಕ್ರೀಡಾ ತರಬೇತುದಾರರ ಅವಶ್ಯಕತೆ ಇದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿರುವ ಸಾಧಕ ಹಿರಿಯ ಕ್ರೀಡಾಪಟುಗಳಿಂದ ತರಬೇತಿ, ಸೂಕ್ತ ಮಾರ್ಗದರ್ಶನ ಉದಯೋನ್ಮಖ ಕ್ರೀಡಾಪಟುಗಳಿಗೆ ಬೇಕು. ಕನಿಷ್ಠ ಒಂದೆರಡು ತಿಂಗಳಾದರೂ ತರಬೇತಿ ನೀಡಿದರೆ ಪ್ರತಿಭಾನ್ವಿತರಿಗೆ ಅನುಕೂಲವಾಗಲಿದೆ ಎಂದರು.

ವಸತಿ ಶಾಲೆ ಪ್ರಾಂಶುಪಾಲೆ ಪಿ.ನಾಗರತ್ನಮ್ಮ ಮಾತನಾಡಿ, 2017–18 ನೇ ಸಾಲಿನಲ್ಲಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಅಯ್ಕೆಗೊಂಡಿದ್ದ ತಂಡಗಳಲ್ಲಿ ನಾಲ್ವರು ಬಾಲಕಿಯರು ರಾಷ್ಟ್ರಮಟ್ಟದ ಸ್ವರ್ಧೆಗೆ ಆಯ್ಕೆಗೊಂಡಿದ್ದರು ಎಂದು ತಿಳಿಸಿದರು.

ಪ್ರಸ್ತುತ ಬಾಲಕರ ತಂಡ ಜಿಲ್ಲಾ ಮಟ್ಟದಿಂದ ಅಯ್ಕೆಗೊಂಡು ವಿಭಾಗೀಯ ಮಟ್ಟಕ್ಕೆ ಆಯ್ಕೆಗೊಂಡಿರುವುದು ಸಂತಸವಾಗಿದೆ. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಎಂದರು.

ದೈಹಿಕ ಶಿಕ್ಷಣ ಶಿಕ್ಷಕ ಯಲ್ಲಪ್ಪನಾಯಕ ಶಿಕ್ಷಕರಾದ ಸಂತೋಷ್ ಬೆಣ್ಣೆ, ಎಸ್.ಎಂ.ಶ್ವೇತ, ಯಶೋಧಮ್ಮ, ಹರೀಶ್ ನಾಯಕ್, ಮೀನಾಕ್ಷಿ ಪಾಟೀಲ್, ಹಾಜಿರಾ ಬಾನು, ಗಾಯಿತ್ರಿ ಹೆಗಡೆ, ಶೈಲಜ, ನಾರಾಯಣಸ್ವಾಮಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !