ಸೋಮವಾರ, ನವೆಂಬರ್ 30, 2020
26 °C

ದೇವನಹಳ್ಳಿ: ಸಿಂಡಿಕೇಟ್ ಸದಸ್ಯಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ:‌ ‘ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಡಾ.ಎಂ. ರವಿಕುಮಾರ್ ಬದುಕು ಕಿರಿಯ ವೈದ್ಯರಿಗೆ ಮಾದರಿಯಾಗಬೇಕು’ ಎಂದು ಖಾದಿ ಬೋರ್ಡ್ ನಿರ್ದೇಶಕ ಕೊನಗಿನಬೆಲೆ ನಾರಾಯಣಸ್ವಾಮಿ ಹೇಳಿದರು.

ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಡಾ.ಎಂ. ರವಿಕುಕುಮಾರ್ ನೇಮಕವಾಗಿರುವ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಿದ ನಂತರ ಅವರು ಮಾತನಾಡಿದರು.

ತಳ ಸಮುದಾಯದಲ್ಲಿ ಹುಟ್ಟಿ ಬಡತನವನ್ನು ಲೆಕ್ಕಿಸದೆ ಕೂಲಿ ಕೆಲಸ ಮಾಡಿ ಹಗಲು–ರಾತ್ರಿ ಶ್ರಮಪಟ್ಟು ವ್ಯಾಸಂಗ ಮಾಡಿದ್ದಾರೆ. ಅವರ ಶ್ರಮಕ್ಕೆ ಪ್ರತಿಫಲವಾಗಿ ವೈದ್ಯಕೀಯ ಕಾಲೇಜಿನಲ್ಲಿ ಉಚಿತ ಶಿಕ್ಷಣ ಪಡೆದು ವೈದ್ಯ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಗಣನೀಯ ಸೇವೆ ಗುರುತಿಸಿ ಸರ್ಕಾರ ಅವರಿಗೆ ಅವಕಾಶ ನೀಡಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಚಂದ್ರು ಮಾತನಾಡಿ, ‘ರವಿಕುಮಾರ್ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆ, ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಶಿಸ್ತು, ಕಾರ್ಯಕ್ಷಮತೆಯು ಅನುಕರಣೀಯವಾಗಿದೆ ಎಂ‌ದರು.

ಮುಖಂಡರಾದ ರಾಮಯ್ಯ, ಸೂಲಿಬೆಲೆ ನಾರಾಯಣಸ್ವಾಮಿ, ಸಂತಳಿ ಲೋಕೇಶ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.