ಶುಕ್ರವಾರ, ಮೇ 7, 2021
22 °C
ಪ್ರಯಾಣಿಕರಿಲ್ಲದೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಖಾಲಿ

ಖಾಸಗಿ ಬಸ್‌ ನಿಲ್ದಾಣ ಭರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ನೌಕರರು ನಡೆಸುತ್ತಿರುವ ಮುಷ್ಕರದಿಂದಾಗಿ ಸೋಮವಾರವು ಸಹ ಬಸ್‌ ಸಂಚಾರ ಸಂಪೂರ್ಣವಾಗಿ ಆರಂಭವಾಗಿಲ್ಲ.

ಇವುಗಳ ಜೊತೆಗೆ ಪ್ರಯಾಣಿಕರು ಯುಗಾದಿ ಹಬ್ಬದ ಕಾರಣ ದೂರದ ಊರುಗಳಿಗೆ ಖಾಸಗಿ ಬಸ್‌ಗಳೇ ಅನಿವಾರ್ಯವಾಗಿದ್ದವು.

ಸೋಮವಾರ ಡಿಪೋ ಅಧಿಕಾರಿಗಳು ಸಿಬ್ಬಂದಿಗಳ ಮನವೊಲಿಸಿ ಪೊಲೀಸ್ ಭದ್ರತೆಯಲ್ಲಿ 11 ಸಾರಿಗೆ ಬಸ್ ಸಂಚಾರ ಆರಂಭಿಸಿದ್ದವು. ದೊಡ್ಡಬಳ್ಳಾಪುರ-ದಾಬಸ್ ಪೇಟೆ 6, ದೊಡ್ಡಬಳ್ಳಾಪುರ-ದೇವನಹಳ್ಳಿ 2, ದೊಡ್ಡಬಳ್ಳಾಪುರ- ಮಧುರೆ 2 ಹಾಗೂ ದೊಡ್ಡಬಳ್ಳಾಪುರ-ನಂದಿ ಕ್ರಾಸ್ ನಡುವೆ ಒಂದು ಬಸ್ ಮಾತ್ರ ಸಂಚರಿಸಿದವು.

ನಗರದ ಕೊಂಗಾಡಿಯಪ್ಪ ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳು ತುಂಬಿದ್ದ ದೃಶ್ಯ ಕಂಡು ಬಂದರೆ, ಇದರ ಸಮೀಪವೇ ಇರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಖಾಲಿಯಾಗಿದ್ದು, ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಪೊಲೀಸರು ಮಾತ್ರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು