ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ಗಳ ಸುತ್ತಾಟದಿಂದ ಕೆಸರುಗದ್ದೆಯ ದುಸ್ಥಿತಿ: ಹದಗೆಟ್ಟ ಮೈದಾನ ಸರಿಪಡಿಸಿ

Last Updated 20 ಏಪ್ರಿಲ್ 2019, 13:37 IST
ಅಕ್ಷರ ಗಾತ್ರ

ದೇವನಹಳ್ಳಿ: ಚುನಾವಣಾ ಕರ್ತವ್ಯದ ಮೇರೆಗೆ ಬಂದಿದ್ದ ಬಸ್‌ಗಳು ಮೈದಾನದಲ್ಲಿ ಸುತ್ತಾಡಿದ ಪರಿಣಾಮ ಇಡೀ ಮೈದಾನ ಕೆಸರು ಗದ್ದೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಗರದ ಹೃದಯ ಭಾಗದಲ್ಲಿರುವ ಏಕೈಕ ಸರ್ಕಾರಿ ಕ್ರೀಡಾಂಗಣವನ್ನು ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ಸ್ವಾಧೀನಕ್ಕೆ ಪಡೆದಿದೆ. ಹೊಸಕೋಟೆ ಮತ್ತು ದೊಡ್ಡಬಳ್ಳಾಪುರ ಭಗತ್ ಸಿಂಗ್ ಕ್ರೀಡಾಂಗಣವು ಇದಕ್ಕೆ ಹೊರತಲ್ಲ. ಹೊಸಕೋಟೆ ಮತ್ತು ದೊಡ್ಡಬಳ್ಳಾಪುರ ಕ್ರೀಡಾಂಗಣದಲ್ಲಿ ಬಸ್‌ಗಳನ್ನು ಒಳ ಪ್ರವೇಶಿಸಲು ಬಿಟ್ಟಿಲ್ಲ’ ಎಂದುಕ್ರೀಡಾಪಟು ಪ್ರಸನ್ನಹಳ್ಳಿ ನಟರಾಜ್ ಹೇಳಿದರು.

‘ದೇವನಹಳ್ಳಿಯಲ್ಲಿನ ಕ್ರೀಡಾಂಗಣಕ್ಕೆ ಚುನಾವಣಾ ಕರ್ತವ್ಯಕ್ಕೆಂದು ನಿಯೋಜನೆ ಮಾಡಲಾದ ಬಸ್, ಕಾರು, ಜೀಪ್‌, ಖಾಸಗಿ ಶಾಲಾ ಬಸ್‌ಗಳನ್ನು ಬಿಟ್ಟ ಪರಿಣಾಮ ಬಿದ್ದ ಮಳೆಯಲ್ಲಿ ಅಡ್ಡಾದಿಡ್ಡಿ ತಿರುವು ಪಡೆದ ವಾಹನಗಳಿಂದ ಟ್ರ್ಯಾಕ್ ಸಂಪುರ್ಣ ಹಾಳಾಗಿದೆ. ಇದರ ಜವಾಬ್ದಾರಿ ಹೊರುವವರು ಯಾರು’ ಎಂದು ಅವರು ಪ್ರಶ್ನಿಸಿದ್ದಾರೆ.

ಕ್ರೀಡಾಪಟು ನಾರಾಯಣಸ್ವಾಮಿ ಮಾತನಾಡಿ, ‘ಕ್ರೀಡಾಂಗಣದಲ್ಲಿ ಈ ಮೊದಲೇ ಕಳಪೆ ಟ್ರ್ಯಾಕ್ ನಿರ್ಮಾಣ ಮಾಡಲಾಗಿತ್ತು. ಇಲಾಖೆ ಚುನಾವಣಾ ಕರ್ತವ್ಯಕ್ಕಾಗಿ ಬಸ್ ನಿಲುಗಡೆಗೆ ಅವಕಾಶ ಮಾಡಿಕೊಟ್ಟ ಪರಿಣಾಮ ಕ್ರೀಡಾಂಗಣ ಪೂರ್ತಿ ಅವ್ಯವಸ್ಥೆಯಾಗಿದೆ. ಮಾತ್ರವಲ್ಲ ಅಭ್ಯಾಸಕ್ಕೂ ಬಹಳ ತೊಂದರೆಯಾಗುತ್ತಿದೆ. ಮೈದಾನ ಒಣಗಿದ ನಂತರ ಮುಳ್ಳಿನ ಮೇಲೆ ನಡೆದಂತೆ ಕಿರಿಕಿರಿಯಾಗುತ್ತದೆ. ಬಸ್ ನಿಲುಗಡೆಗೆ ಬೇರೆ ಸಾಕಷ್ಟು ಕಡೆ ಸ್ಥಳಾವಕಾಶವಿತ್ತು. ಆದರೆ ಇಲಾಖೆ ಅಧಿಕಾರಿಗಳು ಆ ಬಗ್ಗೆ ಯೋಚಿಸಿಲ್ಲ.ಇದನ್ನು ಆದಷ್ಟು ಬೇಗ ಸರಿಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಹದಗೆಟ್ಟ ಮೈದಾನದ ಕುರಿತು ದೂರವಾಣಿ ಕೆರೆ ಮಾಡಿದಾಗ ಇಲಾಖೆ ಅಧಿಕಾರಿಗಳು ಕರೆಗೆ ಉತ್ತರಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT