ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆಬಾವಿ ನೀರಲ್ಲಿ ಫ್ಲೋರೈಡ್!

ಕುಡಿಯಲು, ಅಡುಗೆಗೆ ಬಳಸಲು ಅಯೋಗ್ಯ: ಆರೋಗ್ಯ ಇಲಾಖೆ ಎಚ್ಚರಿಕೆ
Last Updated 12 ಡಿಸೆಂಬರ್ 2022, 6:07 IST
ಅಕ್ಷರ ಗಾತ್ರ

ಸೂಲಿಬೆಲೆ: ಹೋಬಳಿಯ ಸೊಣ್ಣಹಳ್ಳಿಪುರ ಮತ್ತು ಕಂಬಳೀಪುರ ಗ್ರಾಮದ ಕೊಳವೆ ಬಾವಿಗಳಲ್ಲಿ ಫ್ಲೋರೈಡ್ ಅಂಶ ಕಾಣಿಸಿಕೊಂಡಿದ್ದು, ಈ ಕೊಳವೆ ಬಾವಿಗಳ ನೀರು ಕುಡಿಯಲು ಹಾಗೂ ಅಡಿಗೆ ಮಾಡಲು ಬಳಸಲು ಯೋಗ್ಯವಲ್ಲ ಎಂದು ಆರೋಗ್ಯ ಇಲಾಖೆ
ತಿಳಿಸಿದೆ.

ಸೊಣ್ಣಹಳ್ಳಿಪುರ ಮತ್ತು ಕಂಬಳೀಪುರ ಗ್ರಾಮದ ಕೊಳವೆ ಬಾವಿಗಳ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಪ್ರಯೋಗಾಲಯದ ವರದಿಯಲ್ಲಿ 1.3 ರಷ್ಟು ಪ್ಲೋರೈಡ್ ಅಂಶ ಪತ್ತೆಯಾಗಿದೆ. ಕೊಳವೆ ಬಾವಿಗಳ ನೀರನ್ನು ನೇರವಾಗಿ ಕುಡಿಯಲು ಹಾಗೂ ಅಡಿಗೆ ಮಾಡಲು ಬಳಸಿದರೆ, ದಂತಗಳ
ಫ್ಲೂರೋಸಿಸ್ ಹಾಗೂ ಮೂಳೆ ಸವೆತದಂತಹ ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಈ ನೀರನ್ನು ಕುಡಿಯಲು ಮತ್ತು ಅಡುಗೆಗೆ ಬಳಸದಿರಿ ಎಂದು ಸಲಹೆ ನೀಡಿದೆ.

ಗ್ರಾಮಸ್ಥರಲ್ಲಿ ಅರಿವು: ಗ್ರಾಮಸ್ಥರಿಗೆ ಭಿತ್ತಿಪತ್ರದ ಮೂಲಕ ಪ್ಲೋರೈಡ್ ಅಂಶ ಪತ್ತೆಯಾಗಿರುವ ಬಗ್ಗೆ ಮತ್ತು ಕೊಳಾಯಿ ನೀರನ್ನು ನೇರವಾಗಿ ಕುಡಿಯಲು ಬಳಸದಂತೆ ಸೂಚಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕದ ಸಂಸ್ಕರಿಸಿದ ನೀರು ಬಳಸುವಂತೆ ಅರಿವು ಮೂಡಿಸಲಾಗಿದೆ ಎಂದು ಲಕ್ಕೊಂಡಹಳ್ಳಿ ಗ್ರಾ.ಪಂ ಪಿಡಿಓ ರಮೇಶ ರಾವ್
ತಿಳಿಸಿದರು.

ಫ್ಲೋರೈಡ್‌ ಅಂಶ ಪತ್ತೆಯಾಗಿಲ್ಲ: ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ತಾಲ್ಲೂಕಿನ ಕೊಳವೆ ಬಾವಿಗಳ ನೀರಿನಲ್ಲಿ ಫ್ಲೋರೈಡ್ ಅಂಶ ಪತ್ತೆಯಾಗಿಲ್ಲ ಎಂದು
ತಿಳಿಸಿದ್ದಾರೆ. ಸೊಣ್ಣಹಳ್ಳಿಪುರ ಗ್ರಾಮದ ಕೊಳವೆ ಬಾವಿಯ ನೀರನ್ನು ಮತ್ತೊಮ್ಮೆ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸಲಾಗುವುದು ಎಂದು ಹೊಸಕೋಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT