ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಬರೋಡಾ ಬ್ಯಾಂಕ್‌ನ ಸಂಸ್ಥಾಪನಾ ದಿನಾಚರಣೆ

Last Updated 22 ಜುಲೈ 2022, 5:35 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ನಗರದಲ್ಲಿ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಬ್ಯಾಂಕ್‌ನ ಸಂಸ್ಥಾಪನಾ ದಿನ ಆಚರಿಸಲಾಯಿತು.

ಬ್ಯಾಂಕ್‍ ವ್ಯವಸ್ಥಾಪಕ ಶ್ರೀನಿವಾಸರಾವ್ ಮಾತನಾಡಿ, 1908ರಂದು ಗುಜರಾತ್‍ನ ಪ್ರಿನ್ಸ್ಲಿ ಸ್ಟೇಟ್ ಆಫ್ ಬರೋಡಾದಲ್ಲಿ ಬ್ಯಾಂಕ್‌ ಸ್ಥಾಪಿತವಾಯಿತು. ಪ್ರಸ್ತುತ ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಆಗಿದೆ. ಇದರಲ್ಲಿ ವಿಜಯಾ ಹಾಗೂ ದೇನಾ ಬ್ಯಾಂಕ್‍ಗಳು ವಿಲೀನಗೊಂಡಿವೆ ಎಂದರು.

ಕೃಷಿ, ಗೃಹ, ಶೈಕ್ಷಣಿಕ, ವೈಯಕ್ತಿಕ, ಆಭರಣ ಸೇರಿದಂತೆ ಹಲವಾರು ವಾಣಿಜ್ಯ ಉದ್ದೇಶಗಳಿಗೆ ಸಾಲ ನೀಡುವ ಮೂಲಕ ಆರ್ಥಿಕ ಪ್ರಗತಿಗೆ ಸಹಕರಿಸುತ್ತಿದೆ. ಬ್ಯಾಂಕ್‍ನಲ್ಲಿ ಗ್ರಾಹಕ ಸ್ನೇಹಿ ವಾತಾವರಣ ಮೂಡಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ಬ್ಯಾಂಕ್‍ನ ಉನ್ನತಿಗೆ ಗ್ರಾಹಕರ ಸಹಕಾರ ಸ್ಮರಣೀಯ ಎಂದು ತಿಳಿಸಿದರು.

ಹಿರಿಯ ಗ್ರಾಹಕ ಜಿ.ಡಿ. ಲಕ್ಷ್ಮಿನಾರಾಯಣ್ ಮಾತನಾಡಿ, ‘45 ವರ್ಷಗಳಿಂದ ಬ್ಯಾಂಕ್‌ನಲ್ಲಿ ವ್ಯವಹಾರ ಮಾಡುತ್ತಿದ್ದೇನೆ. ಈ ಮೊದಲು ವಿಜಯಾ ಬ್ಯಾಂಕ್‍ನಲ್ಲಿ ತಮ್ಮ ಕುಟುಂಬದ ಖಾತೆ ಇತ್ತು. ಇದು ಮೂರನೇ ತಲೆಮಾರು ಆಗಿದೆ. ಗ್ರಾಹಕರ ಸೇವೆಯಿಂದಲೇ ಬ್ಯಾಂಕ್ ತನ್ನ ಹೆಸರನ್ನು ಗುರುತಿಸಿಕೊಂಡಿರುವುದು ಅಭಿನಂದನೀಯ’ ಎಂದರು.

ವಿಜಯಾ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಎಸ್. ಶ್ರೀನಿವಾಸಯ್ಯ ಮಾತನಾಡಿ, ಬ್ಯಾಂಕ್‍ಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ಗ್ರಾಹಕರಾದ ಜೆ.ಸಿ. ನಾಗರಾಜ್‌, ರಾಜಣ್ಣ, ಅಶ್ವತ್ಥ, ಕೆ.ಎಂ. ಕೃಷ್ಣಮೂರ್ತಿ, ಜಗದೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT