ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ

7
ಒಂದು ದಿನಕ್ಕೆ ₹200 ಶುಲ್ಕ ಪಾವತಿ, ಸಂಜೆ 6ರೊಳಗೆ ನಿಗದಿತ ಸ್ಥಳದಲ್ಲೇ ವಿಸರ್ಜಿಸಬೇಕು

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ

Published:
Updated:
Deccan Herald

ದೊಡ್ಡಬಳ್ಳಾಪುರ: ಸಾರ್ವಜನಿಕವಾಗಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವವರು ಕಡ್ಡಾಯವಾಗಿ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು ಎಂದು ನಗರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಬಿ.ಕೆ.ಪಾಟೀಲ್ ತಿಳಿಸಿದರು.

ನಗರದಲ್ಲಿ ಗುರುವಾರ ಗಣೇಶ ಹಬ್ಬದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಶಾಂತಿಯುತವಾಗಿ ಹಾಗೂ ಪ್ರಾಣಹಾನಿಯಾಗದಂತೆ ಹಬ್ಬದ ಆಚರಣೆ ಆಗಬೇಕು ಎನ್ನುವುದೇ ಪೊಲೀಸ್ ಇಲಾಖೆ ಮುಖ್ಯ ಉದ್ದೇಶವಾಗಿದೆ ಎಂದರು.

ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಐದು ವರ್ಷಗಳ ಹಿಂದೆ ಗಣೇಶಮೂರ್ತಿ ವಿಸರ್ಜನೆ ವೇಳೆ ನಡೆದ ವಿದ್ಯುತ್ ಅನಾಹುತಗಳಿಂದಾಗಿ ಐವರು ಮೃತಪಟ್ಟಿದ್ದರು. ಇಂತಹ ಘಟನೆಗಳು ಮರುಕಳಿಸಬಾರದು ಎನ್ನುವುದೇ ಕಾಳಜಿಯಾಗಿದೆ. ಹೀಗಾಗಿ ಸಾರ್ವಜನಿಕವಾಗಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವವರು ಪೊಲೀಸ್, ಬೆಸ್ಕಾಂ ಹಾಗೂ ನಗರಸಭೆ ಕಾರ್ಯಾಲಯದಿಂದ ಸೂಕ್ತ ಶುಲ್ಕ ಪಾವತಿ ಮಾಡಿ ಅನುಮತಿ ಪಡೆಯಬೇಕು. ಸಂಜೆ 6ಗಂಟೆ ಒಳಗೆ ಗಣೇಶಮೂರ್ತಿ ನಗರಸಭೆ ವತಿಯಿಂದ ಗುರುತಿಸಿರುವ ಸ್ಥಳದಲ್ಲಿಯೇ ವಿಸರ್ಜಿಸಬೇಕು ಎಂದು ಮಾಹಿತಿ ನೀಡಿದರು.

ನಗರಸಭೆ ಪರಿಸರ ವಿಭಾಗದ ಎಂಜಿನಿಯರ್ ಈರಣ್ಣ ಮಾತನಾಡಿ, ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶಮೂರ್ತಿಗಳನ್ನೇ ಪ್ರತಿಷ್ಠಾಪನೆ ಮಾಡುವ ಮೂಲಕ ಜಲ ಮಾಲಿನ್ಯ ತಡೆಯಬೇಕು. ಬಣ್ಣ, ಪಿಒಪಿ ಮತ್ತಿತರೆ ಗಣೇಶ ಮೂರ್ತಿಗಳನ್ನು ತಯಾರಿಸಲು ಈ ವರ್ಷ ನಗರಸಭೆ ವತಿಯಿಂದ ಅನುಮತಿ ನೀಡಿಲ್ಲ. ಮಾಲೀನ್ಯ ನಿಯಂತ್ರಣ ಮಂಡಳಿಯು ಗಣೇಶಮೂರ್ತಿ ತಯಾರಿಕೆಗೆ ನಿಯಮಾವಳಿ ಜಾರಿಗೆ ತಂದಿದೆ ಎಂದರು.

ಬೆಸ್ಕಾಂ ನಗರ ವಿಭಾಗದ ಸಹಾಯಕ ಎಂಜಿನಿಯರ್ ನಟೇಶ್ ಮಾತನಾಡಿ, ಸಾರ್ವಜನಿಕವಾಗಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಲು ಒಂದು ದಿನಕ್ಕೆ 200 ಶುಲ್ಕ ಪಾವತಿ ಮಾಡಬೇಕು. ಗಣೇಶಮೂರ್ತಿ ಮೆರವಣಿಗೆ ಮಾಡುವ ಸಂದರ್ಭದಲ್ಲಿ ಕಬ್ಬಿಣದ ವಸ್ತು ಬಳಸಿ ಅಲಂಕಾರ ಮಾಡಬಾರದು. ಅನುಮತಿ ಇಲ್ಲದೆ ವಿದ್ಯುತ್ ಬಳಕೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಾರ್ವಜನಿಕರ ಪರವಾಗಿ ಮಾತನಾಡಿದ ನಾಗರಾಜು, ನರಸಿಂಹಂಮೂರ್ತಿ, ವೀರಪ್ಪ, ಭಾಸ್ಕರ್, ನಗರಸಭೆ ಸದಸ್ಯ ಲೋಕೇಶ್ ಬಾಬು, ಪೊಲೀಸ್, ಬೆಸ್ಕಾಂ ಹಾಗೂ ನಗರಸಭೆ ಎಲ್ಲ ಇಲಾಖೆಗಳ ಅನುಮತಿ ಒಂದೇ ಸೂರಿನಡಿ ಪಡೆಯುವಂತೆ ಮಾಡಬೇಕು ಎಂದರು.

ನಗರ ಪೊಲೀಸ್ ಠಾಣೆ ಅಪರಾಧ ವಿಭಾಗದ ಸಬ್‌ ಇನ್‌ಸ್ಪೆಕ್ಟರ್ ರಂಗನಾಥ್, ಮುಖ್ಯಪೇದೆ ಶಿವರಾಜ್ ಇದ್ದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !