ಶುಕ್ರವಾರ, ಜುಲೈ 30, 2021
28 °C

ಉತ್ತಮ ಮಳೆ: ಕೋಡಿ ಬಿದ್ದ ಚಿಕ್ಕರಾಯಪ್ಪನಹಳ್ಳಿ ಕೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ತಾಲ್ಲೂಕಿನ ಪಂಚಗಿರಿ (ನಂದಿ ಬೆಟ್ಟದ ಸಾಲು) ಶ್ರೇಣಿಯ ಬೆಟ್ಟಗಳಲ್ಲಿ ಎರಡು ದಿನಗಳಿಂದ ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ಬೆಟ್ಟದ ತಪ್ಪಲಿನ ಕೆರೆಗಳಿಗೆ ಹೆಚ್ಚಿನ ಒಳ ಹರಿವು ಬರಲು ಆರಂಭವಾಗಿದೆ.

ನಂದಿ ಬೆಟ್ಟದ ಅಂಚಿನಲ್ಲೇ ಉತ್ತರ ದಿಕ್ಕಿಗೆ ಇರುವ ಚನ್ನರಾಯಸ್ವಾಮಿ ಬೆಟ್ಟದ ತಪ್ಪಲಿನ ಚನ್ನಾಪುರ ಕೆರೆ ಶನಿವಾರ ಸಂಜೆ ಸುರಿದ ಮಳೆಗೆ ಕೋಡಿ ಬಿದ್ದಿದ್ದು ಕೆರೆಯಿಂದ ನೀರು ಹೊರಗೆ ಹರಿದು ಹೋಗಲು ಆರಂಭಿಸಿದೆ. ಕೆರೆ ಕೋಡಿ ಬಿದ್ದಿರುವುದರಿಂದ ಕೆರೆ ನೀರಿನಲ್ಲಿ ಸಾಕಾಣಿಕೆ ಮಾಡಿದ್ದ ಮೀನುಗಳು ಹೊರ ಹೋಗುತ್ತಿರುವ ನೀರಿನಲ್ಲಿ ಈಜಿಕೊಂಡು ಹೋಗದಂತೆ ಬಲೆ ಬಿಟ್ಟು ಕಾವಲು ಕಳಿತುಕೊಳ್ಳುವಂತಾಗಿದೆ.

‘ಸಾಮಾನ್ಯವಾಗಿ ಕೆರೆಗೆ ಹೊಸದಾಗಿ ಮಳೆ ನೀರು ಹರಿದು ಬರುವ ಸಂದರ್ಭದಲ್ಲಿ ಕೆರೆಯಲ್ಲಿನ ಮೀನುಗಳು ನೀರು ಹರಿದು ಬರುವ ದಿಕ್ಕಿನೆಡೆಗೆ ಎದುರಾಗಿ ಅಥವಾ ನೀರು ಹೊರ ಹೋಗುತ್ತಿದ್ದರೆ ನೀರಿನಲ್ಲಿ ಈಜಿ ಹೊಸ ಸ್ಥಳದತ್ತ ಆಹಾರ ಹುಡುಕಿಕೊಂಡು ಹೋಗುವುದು ಸಹಜ’ ಎನ್ನುತ್ತಾರೆ ಕೆರೆ ಅಂಗಳವನ್ನು ಗುತ್ತಿಗೆ ಪಡೆದು ಮೀನು ಸಾಕಾಣಿಕೆ ಮಾಡುವ ಗುರು.

ಪಂಚಗಿರಿ ಶ್ರೇಣಿಯ ಸುತ್ತಲು ಮಳೆ ಹೆಚ್ಚಾಗಿರುವ ಕಾರಣದಿಂದಾಗಿ ಹೊಲಗಳಲ್ಲಿ ನೀರು ನಿಂತಿದ್ದು ತೇವ ಹೆಚ್ಚಾಗಿ ಬಿತ್ತನೆಗೆ ಅಡ್ಡಿಯಾಗಿದೆ. ಹೀಗಾಗಿ ರಾಗಿ ಬಿತ್ತನೆಗೆ ಹಿನ್ನಡೆಯಾಗಿದೆ ಎನ್ನುತ್ತಾರೆ ಈ ಭಾಗದ ರೈತರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.