ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಹಿರಿಯನ್ನು ಗೌರವಿಸಬೇಕು

Last Updated 22 ಮೇ 2019, 13:58 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಶಾರದಾ ಬಾಲಿಕಾ ಪ್ರೌಢ ಶಾಲೆಯಲ್ಲಿ 1988-89ರ ಸಾಲಿನಲ್ಲಿ ವ್ಯಾಸಂಗ ಮಾಡಿದ್ದ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶಿಕ್ಷಕರಾದ ಎಚ್.ಟಿ. ಹೇಮಂತರಾಜು ಹಾಗೂ ಎಂ.ಎನ್. ರಾಮಮೂರ್ತಿ ಮಾತನಾಡಿ, ಗುರುಹಿರಿಯರಿಗೆ ಗೌರವಿಸುವ ಮನೋಭಾವ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ತಾವು ವ್ಯಾಸಂಗ ಮಾಡಿರುವ ಶಾಲೆಯ ಶಿಕ್ಷಕರಿಗೆ ಗುರುವಂದನೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಗುರುಗಳಿಗಿಂತ ಶಿಷ್ಯರು ಹೆಚ್ಚಿನ ಸಾಧನ ಮಾಡಿದರೆ ಅದಕ್ಕಿಂತ ಸಂತೋಷ ಬೇರಿಲ್ಲ ಎಂದರು.

ಶಿಕ್ಷಕರಾದ ಎಚ್.ಟಿ. ಹೇಮಂತರಾಜು, ಎಂ.ಎನ್. ರಾಮಮೂರ್ತಿ, ಆರ್.ಲತಾ, ಆರ್. ವಿಜಯಾ ಅವರನ್ನು ಸನ್ಮಾನಿಸಲಾಯಿತು.

ಸಂಘಟಕರಾದ ಡಿ.ಕೆ. ವೆಂಕಟೇಶ್, ಕೆ.ಎಸ್. ನರೇಂದ್ರ, ಕೆ.ಎಲ್. ದೇವರಾಜ್, ಆರ್. ಕೃಷ್ಣಮೂರ್ತಿ, ಡಿ.ಎ. ನರಸಿಂಹಪ್ರಸಾದ್ ಸೇರಿದಂತೆ 1988-89ರ ಸಾಲಿನಲ್ಲಿ ಕಲಿತಿದ್ದ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT