ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಶಿಬಿರ ಗ್ರಾಮೀಣ ಭಾಗಕ್ಕೆ ವರದಾನ

Last Updated 11 ನವೆಂಬರ್ 2019, 14:59 IST
ಅಕ್ಷರ ಗಾತ್ರ

ಆನೇಕಲ್ : ಗ್ರಾಮೀಣ ಭಾಗದಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು ಜನರ ಆರೋಗ್ಯವನ್ನು ಕಾಪಾಡುವಲ್ಲಿ ಉತ್ತಮ ವೇದಿಕೆಯಾಗಿವೆ. ಈ ಮೂಲಕ ಸ್ವಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಲು ಸಂಘ ಸಂಸ್ಥೆಗಳು ನೆರವಾಗಿವೆ ಎಂದು ಸಂಸ್ಕೃತ ವಿದ್ವಾಂಸ ಅಕ್ಷಯ್‌ ಜಾಲಿಹಾಳ್‌ ತಿಳಿಸಿದರು.

ಅವರು ತಾಲ್ಲೂಕಿನ ಅತ್ತಿಬೆಲೆಯಲ್ಲಿ ಕ್ರಾಂತಿ ಪ್ರತಿಷ್ಠಾನ ಮತ್ತು ನಾರಾಯಣ ಹೃದಯಾಲಯ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಅನಾರೋಗ್ಯದಿಂದ ಮುಕ್ತವಾಗಬಹುದು. ಹಲವಾರು ಕಾಯಿಲೆಗಳನ್ನು ಪ್ರಾರಂಭದಲ್ಲೇ ಪತ್ತೆ ಹಚ್ಚಿದರೆ ಸುಲಭವಾಗಿ ರೋಗ ಗುಣಪಡಿಸಬಹುದು. ಹಾಗಾಗಿ ಗ್ರಾಮಿಣ ಪ್ರದೇಶದಲ್ಲಿ ವಿವಿಧ ಸಂಘ ಸಂಸ್ಥೆಗಳು ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಬೇಕು ಎಂದರು.

ಸಂಸ್ಥೆಯು ಗಿಡ ನೆಡುವ ಕಾರ್ಯಕ್ರಮ, ಸ್ವಚ್ಛ ಭಾರತ್‌ ಸೇರಿದಂತೆ ವಿವಿಧ ಜನಪರ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಮಾದರಿಯಾಗಿದೆ ಎಂದರು.

ಶಿಬಿರದಲ್ಲಿ ಇಜಿಸಿ, ರಕ್ತದೊತ್ತಡ, ಮೊಮೊಗ್ರೆಫಿ, ಸ್ತ್ರೀರೋಗ ತಜ್ಞರಿಂದ ತಪಾಸಣೆ, ಮಧುಮೇಹ ತಪಾಸಣೆಗಳನ್ನು ಮಾಡಲಾಯಿತು. ೫೧ ಯುನಿಟ್‌ ರಕ್ತ ಸಂಗ್ರಹಿಸಲಾಯಿತು. ನಾರಾಯಣ ನೇತ್ರಾಲಯದ ದೇವರಾಜ್‌ ನಾಯ್ಕ್‌, ಮುಖ್ಯೋಪಾಧ್ಯಾಯರಾದ ಅನುರಾಧಮ್ಮ, ರಾಮಕೃಷ್ಣಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT