ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ: ಸಚಿವ, ಶಾಸಕರಿಗೆ ಪ್ರತ್ಯೇಕ ಜಕಣಾಚಾರಿ ಕಾರ್ಯಕ್ರಮ

ಹೊಸಕೋಟೆ ತಾಲ್ಲೂಕು ಆಡಳಿತದಿಂದ ಎರಡು ಬಾರಿ ಜಕಣಾಚಾರಿ ಸಂಸ್ಮರಣೆ
Last Updated 3 ಜನವರಿ 2023, 5:51 IST
ಅಕ್ಷರ ಗಾತ್ರ

ಹೊಸಕೋಟೆ: ಇಲ್ಲಿನ ತಾಲ್ಲೂಕು ಆಡಳಿತವು ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ಕಾರ್ಯಕ್ರಮವನ್ನು ಒಂದೇ ದಿನ ಎರಡು ಬಾರಿ
ನಡೆಸಿತು.

ಕ್ಷೇತ್ರದಲ್ಲಿ ಸಚಿವರು ಮತ್ತು ಶಾಸಕರು ಒಟ್ಟಿಗೆ ಭಾಗವಹಿಸುವ ಸರ್ಕಾರಿ ಕಾರ್ಯಕ್ರಮಗಳು ರಾಜಕೀಯ ವಾಕ್ಸಮರ ಮತ್ತು ಸಂಘರ್ಷಕ್ಕೆ ವೇದಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಇಬ್ಬರು ಪ್ರತ್ಯೇಕವಾಗಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಕ್ಕಾಗಿ ಎರಡು ಬಾರಿ ಕಾರ್ಯಕ್ರಮ
ನಡೆಸಲಾಯಿತು.

ಬೆಳಿಗ್ಗೆ ಸಚಿವ ಎಂ.ಟಿ.ಬಿ.ನಾಗರಾಜ್‌ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರೆ, ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಶಾಸಕ ಶರತ್‌ ಬಚ್ಚೇಗೌಡ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಶರತ್‌ ಬಚ್ಚೇಗೌಡ, ಜಕಣಾಚಾರಿ ಅವರು ಕೆತ್ತನೆಯ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ದೇವಾಲಯಗಳ ವಿಶ್ವಮಟ್ಟದಲ್ಲಿ ಗಮನ ಸೆಳೆದಿವೆ. ಜಕಣಾಚಾರಿ ಮತ್ತು ಅವರ ಸಮಕಾಲೀನ ಶಿಲ್ಪಿಗಳ ಬಗ್ಗೆ ನಡೆಯುತ್ತಿರುವ ಸಂಶೋಧನೆಗಳು ಇನ್ನಷ್ಟು ಆಗಬೇಕಿದೆ. ಇದಕ್ಕಾಗಿ ಸರ್ಕಾರ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್‌ ಮಹೇಶ್ ಕುಮಾರ್, ವಿಶ್ವಕರ್ಮ ಸಂಘದ ರಾಜ್ಯ ಕಾರ್ಯದರ್ಶಿ ಗೋವಿಂದಮ್ಮ, ತಾಲ್ಲೂಕು ಯುವಘಟಕದ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಶಂಕರಾಚಾರಿ, ಕಾರ್ಯದರ್ಶಿ ಮುನಿಶಾಮಾಚಾರಿ, ಖಜಾಂಚಿ ಶಂಕರಚಾರಿ, ಅಧ್ಯಕ್ಷ ಲಕ್ಷ್ಮೀಕಾಂತ್, ಪದಾಧಿಕಾರಿಗಳಾದ ರಾಜಗೋಪಾಲಾಚಾರಿ, ಬದ್ರಾಚಾರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT