ಹೊಸಕೋಟೆ: ಹಿರಿಯ ನಾಗರಿಕರಿಗೆ ನೆರವಾಗುವ ಮತ್ತು ಹಿರಿಯ ನಾಗರಿಕರಲ್ಲಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಆಸರೆ’ ಕಾರ್ಯಕ್ರಮವನ್ನು ಶುಕ್ರವಾರ ಜಾರಿಗೊಳಿಸಲಾಯಿತು.

ಈ ವೇಳೆ ಮಾತನಾಡಿದ ಹೊಸಕೋಟೆ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಬಿ.ಟಿ. ಗೋವಿಂದ್, ‘ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂಟಿಯಾಗಿರುವ ಹಿರಿಯ ನಾಗರಿಕರು ಮತ್ತು ಗಂಡ ಮತ್ತು ಹೆಂಡತಿ ಮಾತ್ರವೇ ವಾಸವಿರುವವರಲ್ಲಿನ ಅಭದ್ರತೆ, ಅಸುರಕ್ಷತೆಯನ್ನು ಹೋಗಲಾಡಿಸಿ, ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಆಸರೆ ಜಾರಿಗೆ ತರಲಾಗಿದೆ. ಈ ಮೂಲಕ ಹಿರಿಯ ನಾಗರಿಕರು ಮತ್ತು ಗಂಡ ಮತ್ತು ಹೆಂಡತಿ ಮಾತ್ರವೇ ವಾಸಿಸುವವರು ಒಬ್ಬಂಟಿಯಲ್ಲ. ಅವರ ರಕ್ಷಣೆಗಾಗಿ ಪೊಲೀಸರು ಸದಾ ಕಾಲ ಇರುತ್ತಾರೆ ಎಂಬ ಆತ್ಮವಿಶ್ಸಾವ ತುಂಬಲಾಗುತ್ತಿದೆ’ ಎಂದರು.

‘ಆಸರೆ’ ಕಾರ್ಯಕ್ರಮವನ್ನು ನಮ್ಮ ಠಾಣಾ ವ್ಯಾಪ್ತಿಯಲ್ಲಿ ಜಾರಿ ಮಾಡಲಾಗಿದೆ. ಠಾಣಾ ವ್ಯಾಪ್ತಿಯಲ್ಲಿ 19 ಬೀಟ್ಗಳಿದ್ದು ಪ್ರತಿ ಬೀಟ್ಗಳಿಗೆ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ. ಅವರಿಂದ ಒಂಟಿಯಾಗಿ ವಾಸಿಸುವ ಹಿರಿಯ ನಾಗರಿಕರ ಮಾಹಿತಿ ಪಡೆಯಲಾಗಿದೆ. ಜೊತೆಗೆ ಬೆಳಗಿನ ಸಮಯದಲ್ಲಿ ಹಿರಿಯ ನಾಗರಿಕರನ್ನು ಖುದ್ದು ಪೊಲೀಸರೇ ಭೇಟಿ ಮಾಡಿ ಅವರ ಸಮಸ್ಯೆ, ತೊಂದರೆ ಹಾಗೂ ಸುತ್ತಮುತ್ತಲ ವಾತಾವರಣ, ಅವರ ಭದ್ರತೆ ಬಗ್ಗೆ ಕೂಲಂಕಷವಾಗಿ ಮಾಹಿತಿ ಪಡೆಯಲಾಗಿದೆ’ ಎಂದರು.

ಪ್ರತಿ ಬೀಟ್ನಲ್ಲಿ ಹಿರಿಯ ನಾಗರಿಕರ ಮನೆ ಸುತ್ತಮುತ್ತ ನಿಗಾ ವಹಿಸಲಾಗುವುದು. ವಾರಕೊಮ್ಮೆ ಅವರನ್ನು ಬೆಳಗಿನ ವೇಳೆ ಭೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿ ಆರೋಗ್ಯ ವ್ಯತ್ಯಾಸವಾದಲ್ಲಿ ಅವರಿಗೆ ಚಿಕಿತ್ಸೆಗೆ ಅನುಕೂಲ ಕಲ್ಪಿಸಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.