ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ | 'ನನಸಾಗಿಯೇ ಉಳಿದ ಬಡವರ ಕನಸಿನ ಮನೆ'

ನಿವೇಶನಕ್ಕಾಗಿ ಕಾಯುತ್ತಿರುವ 11 ಸಾವಿರ ಫಲಾನುಭವಿಗಳು
ವೆಂಕಟೇಶ್.ಡಿ.ಎನ್
Published 16 ಫೆಬ್ರುವರಿ 2024, 4:34 IST
Last Updated 16 ಫೆಬ್ರುವರಿ 2024, 4:34 IST
ಅಕ್ಷರ ಗಾತ್ರ

ಹೊಸಕೋಟೆ: ತಾಲ್ಲೂಕಿನಲ್ಲಿ 11 ಸಾವಿರಕ್ಕೂ ಅಧಿಕ ಮಂದಿ ನಿವೇಶನರಹಿತರು ಅರ್ಜಿ ಸಲ್ಲಿಸಿ ಹಲವು ವರ್ಷಗಳಿಂದ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ, ಬಡವರ ಸೂರಿನ ಕನಸು ನನಸಾಗಿಯೇ ಉಳಿದಿದೆ.

9099 ನಿವೇಶನ ರಹಿತರು: ತಾಲ್ಲೂಕಿನಲ್ಲಿ 2018-19ನೇ ಸಾಲಿಗೆ ನಿವೇಶನಗಳಿಗಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ 9099 ಇತ್ತು. ಅಲ್ಲದೆ, 4326 ಜನ ವಸತಿಗಾಗಿ ಅರ್ಜಿ ಸಲ್ಲಿಸಿದ್ದರು. ವಸತಿ ಮತ್ತು ನಿವೇಶನ ರಹಿತ ಕುಟುಂಬಗಳು ಒಟ್ಟು 13425 ಇವೆ.

ವಸತಿ ಮತ್ತು ನಿವೇಶನ ರಹಿತರಲ್ಲಿ ಶೇ32 ದಲಿತರು: 2018-19ರ ಮಾಹಿತಿಯಂತೆ ತಾಲ್ಲೂಕಿನಲ್ಲಿ ಇರುವ ಒಟ್ಟು ವಸತಿ ಮತ್ತು ನಿವೇಶನ ರಹಿತರಲ್ಲಿ ಶೇ32 ದಲಿತರೇ ಇದ್ದಾರೆ. ಅದರಲ್ಲಿ ಶೇ28 ಪರಿಶಿಷ್ಟ ಜಾತಿ ಇದ್ದರೆ, ಶೇ4 ಪರಿಶಿಷ್ಟ ವರ್ಗದವರು ಇದ್ದಾರೆ. ಉಳಿದಂತೆ ವಸತಿ ರಹಿತರಲ್ಲಿ ಎಸ್‌.ಸಿ 1072, ಎಸ್‌.ಟಿ 194, ನಿವೇಶನ ರಹಿತರಲ್ಲಿ 2639 ಎಸ್‌.ಸಿ ಇದ್ದರೆ, 402 ಎಸ್‌.ಟಿ ಇದ್ದಾರೆ. ಒಟ್ಟು ಎಸ್‌.ಸಿ 3711, ಎಸ್‌ಟಿ 596 ಇದ್ದಾರೆ.

ತಾಲ್ಲೂಕಿನಲ್ಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ವತಿಯಿಂದ 230ಕ್ಕೂ ಹೆಚ್ಚು ಎಕರೆ ನಿವೇಶನ ಹಂಚಿಕೆಗಾಗಿ ಹದ್ದುಬಸ್ತು ಮಾಡಲಾಗಿದೆ. ಅದರಲ್ಲಿ 100 ಎಕರೆ ವಿವಾದ ಕೋರ್ಟ್‌ನಲ್ಲಿದೆ. ಉಳಿದ 130 ಎಕರೆ ವಶಪಡಿಸಿಕೊಂಡು ಹದ್ದು ಬಸ್ತ್ ಮಾಡಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ಅದರಲ್ಲಿ 25 ಎಕರೆ ರಾಜೀವ್‌ ಗಾಂಧಿ ವಸತಿ ನಿಗಮದ ವತಿಯಿಂದ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಶೀಘ್ರ ಎಲ್ಲರಿಗೂ ನಿವೇಶನ ಹಂಚುವ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದು ಆಶ್ರಯ ಯೋಜನೆ ಅಧಿಕಾರಿ ಸಿದ್ದ ಮುನಿಯಪ್ಪ ತಿಳಿಸಿದರು.

ನಿವೇಶನಗಳಿಲ್ಲದೆ ಪರದಾಡುತ್ತಿರುವ ಕುಟಂಬಗಳು: ಕುಟುಂಬಗಳು ವಿಭಜನೆಗೊಂಡಾಗ ನಿವೇಶನಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಆದರೆ, ಹಲವು ವರ್ಷಗಳಿಂದ ನಿವೇಶನ ಹಂಚಿಕೆ ಮಾಡದ ಕಾರಣ ಚಿಕ್ಕ ಮನೆಯಲ್ಲೇ ಎರಡು, ಮೂರು ಕುಟುಂಬಗಳು ಜೀವನ ನಡೆಸಲಾಗದ ಕಾರಣ ಖಾಲಿ ಜಾಗಗಳಲ್ಲಿ ಗುಡಿಸಲು ಹಾಕಿಕೊಂಡು ಬದುಕಬೇಕಾದ ಸ್ಥಿತಿ ಇದೆ.

ಜಮೀನು ಒತ್ತುವರಿ: ನಿವೇಶನ ಹಂಚಲು ಪರದಾಡುತ್ತಿರುವುದು ಒಂದು ಕಡೆಯಾದರೆ ತಾಲ್ಲೂಕಿನಾದ್ಯಂತ ಸರ್ಕಾರಿ ಜಮೀನು ಒತ್ತುವರಿಯಾಗುತ್ತಿರುವುದು ಅವ್ಯಾಹತವಾಗಿ ನಡೆಯುತ್ತಲೇ ಇದೆ. ಒತ್ತುವರಿ ಕಡಿವಾಣ ಹಾಕುವಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ.

ಸಿದ್ದಮುನಿಯಪ್ಪ ಆಶ್ರಯ ಯೋಜನೆಯ ಅಧಿಕಾರಿ
ಸಿದ್ದಮುನಿಯಪ್ಪ ಆಶ್ರಯ ಯೋಜನೆಯ ಅಧಿಕಾರಿ
ಮಂಜುನಾಥ್ ಅಣ್ಣಯ್ಯ ದಸಂಸ ಬೆಂಗಳೂರು ವಿಭಾಗೀಯ ಸಂಚಾಲಕ
ಮಂಜುನಾಥ್ ಅಣ್ಣಯ್ಯ ದಸಂಸ ಬೆಂಗಳೂರು ವಿಭಾಗೀಯ ಸಂಚಾಲಕ
ದೊಡ್ಡಹುಲ್ಲೂರು ಗ್ರಾಮದಲ್ಲಿ ಹಕ್ಕುಪತ್ರಗಳನ್ನು ವತರಣೆ ಮಾಡಿದ ಶಾಸಕ ಶರತ್ ಬಚ್ಚೇಗೌಡ (ಸಂಗ್ರಹ ಚಿತ್ರ)
ದೊಡ್ಡಹುಲ್ಲೂರು ಗ್ರಾಮದಲ್ಲಿ ಹಕ್ಕುಪತ್ರಗಳನ್ನು ವತರಣೆ ಮಾಡಿದ ಶಾಸಕ ಶರತ್ ಬಚ್ಚೇಗೌಡ (ಸಂಗ್ರಹ ಚಿತ್ರ)

17 ಪಂಚಾಯಿತಿಗಳಲ್ಲಿ 120 ಎಕರೆ ಸರ್ಕಾರಿ ಜಮೀನು ವಶಕ್ಕೆ ಪಡೆಯಲಾಗಿದೆ. ಶೀಘ್ರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು - ವಿಜಯ್‌ಕುಮಾರ್ ತಹಶೀಲ್ದಾರ್ ಹೊಸಕೋಟೆ

ಜಡಿಗೇನಹಳ್ಳಿ ಸಿದ್ದೇನಹಳ್ಳಿ ಮಾರಂಗೆರೆ ಸೇರಿದಂತೆ ಹಲವು ಕಡೆ ನಿವೇಶನ ಹಂಚಿಕೆ ನಡೆದಿದೆ. ಸೂಲಿಬೆಲೆಯಲ್ಲೂ 9 ಎಕರೆ ಜಮೀನು ನಿವೇಶನಗಳ ಹಂಚಿಕೆಗೆ ಸಿದ್ಧವಾಗುತ್ತಿದೆ- ಸಿದ್ದಮುನಿಯಪ್ಪ ಆಶ್ರಯ ಯೋಜನೆ ಅಧಿಕಾರಿ

ತಾಲ್ಲೂಕಿನಲ್ಲಿ ಶೇ32 ದಲಿತರು ವಸತಿ ನಿವೇಶನ ರಹಿತ ಇರುವುದು ನಿಜಕ್ಕೂ ಖೇದಕರ. ಈ ವಿಚಾರವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಇದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು- ಮಂಜುನಾಥ್ ಅಣ್ಣಯ್ಯ ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT