ನಾಡಧ್ವಜಕ್ಕೆ ಅಪಮಾನ, ಕ್ರಮಕ್ಕೆ ಒತ್ತಾಯ

ಸೋಮವಾರ, ಜೂನ್ 17, 2019
26 °C

ನಾಡಧ್ವಜಕ್ಕೆ ಅಪಮಾನ, ಕ್ರಮಕ್ಕೆ ಒತ್ತಾಯ

Published:
Updated:
Prajavani

ವಿಜಯಪುರ: ಇಲ್ಲಿನ 20 ನೇ ವಾರ್ಡ್‌ನ ಇಂದಿರಾನಗರದಲ್ಲಿ ನಿರ್ಮಾಣ ಮಾಡಿದ್ದ ಕನ್ನಡ ದ್ವಜಸ್ತಂಭದಿಂದ ನಾಡಧ್ವಜವನ್ನು ಕಿಡಿಗೇಡಿಗಳು ಕಿತ್ತುಹಾಕಿ ಅಪಮಾನ ಮಾಡಿದ್ದು ಅವರನ್ನು  ಬಂಧಿಸಬೇಕು ಎಂದು ಕರವೇ (ಪ್ರವೀಣ್‌ ಶೆಟ್ಟಿ) ಮುಖಂಡರು ಪೊಲೀಸರಿಗೆ ಮನವಿ ಸಲ್ಲಿಸಿದರು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮನವಿ ಪತ್ರ ಸಲ್ಲಿಸಿದ ಅವರು, ‘ನಾಡಧ್ವಜಕ್ಕೆ ಉದ್ದೇಶಪೂರ್ವಕವಾಗಿಯೇ ಈ ರೀತಿಯಾಗಿ ಅಪಮಾನವೆಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅಪಮಾನವೆಸಗಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.

ಮನವಿಪತ್ರ ತೆಗೆದುಕೊಂಡ ಸಬ್‌ ಇನ್‌ಸ್ಪೆಕ್ಟರ್ ನರೇಶ್ ನಾಯಕ್ ಮಾತನಾಡಿ, ‘ನಾಡಧ್ವಜಕ್ಕೆ ಅಪಮಾನವೆಸಗಿರುವವರು ಯಾರೇ ಆಗಿದ್ದರೂ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸುತ್ತೇವೆ’ ಎಂದರು.

ಕನ್ನಡಪರ ಸಂಘಟನೆಗಳು ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದಂತೆ ಗಮನಹರಿಸಿ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಏಕತೆಯಿಂದ ಮುನ್ನಡೆಯಬೇಕು. ಇಲ್ಲೆ ಹುಟ್ಟಿ ಬೆಳೆದಿರುವ ನೀರು ಪರಸ್ಪರ ಸಾಮರಸ್ಯದಿಂದ ಹೋಗಬೇಕು ಎಂದು ಸಲಹೆ ನೀಡಿದರು.

ರವಿಕುಮಾರ್, ಪವನ್‌ಕುಮಾರ್, ಶಂಕರ್, ಚಂದ್ರಪ್ಪ, ಪ್ರಕಾಶ್, ಭರತ್, ಮುರಳಿ, ಶ್ರೀಕಾಂತ್, ಮಂಜುನಾಥ್ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !