ಗುರುವಾರ , ಸೆಪ್ಟೆಂಬರ್ 19, 2019
24 °C

‘ಪಕ್ಷ ಸಂಘಟನೆ ಪದಾಧಿಕಾರಿಗಳ ಕರ್ತವ್ಯವಾಗಲಿ’

Published:
Updated:
Prajavani

ದೇವನಹಳ್ಳಿ: ಪಕ್ಷ ಸಂಘಟನೆ ಪದಾಧಿಕಾರಿಗಳ ಆದ್ಯ ಕರ್ತವ್ಯವಾಗಬೇಕು ಎಂದು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ರಾಜ್ಯ ಘಟಕ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪಕ್ಷದ ವತಿಯಿಂದ ನಡೆದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ನೂತನ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಸಭೆಯ ನಂತರ ಮಾತನಾಡಿದರು.

‘ಹಣ ಅಧಿಕಾರ ಇತರೆ ಆಮಿಷಗಳನ್ನು ಒಡ್ಡಿ ರಾಜಕೀಯ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯುತ್ತವೆ. ತತ್ವ ಸಿದ್ಧಾಂತಗಳಿಲ್ಲದ ಪಕ್ಷಗಳಿಂದ ಜ್ವಲಂತ ಸಮಸ್ಯೆಗಳು ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ತತ್ವ ಸಿದ್ಧಾಂತ ಹೊಂದಿ ಸರ್ವರಿಗೂ ಸಮಪಾಲು ನೀಡುವ ಬಿಎಸ್‌ಪಿಯನ್ನು ಒಂದು ಸಮುದಾಯಕ್ಕೆ ಮಾತ್ರ ಮೀಸಲಿಟ್ಟಿರುವ ಕೆಲವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು’ ಎಂದು ಹೇಳಿದರು.

ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಎಚ್.ಡಿ. ಬಸವರಾಜು ಮಾತನಾಡಿ, ‘ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಿದಾಗ ಮಾತ್ರ ಪಕ್ಷ ಬೆಳೆಯಲು ಸಾಧ್ಯ. ಪ್ರಸ್ತುತ ಪುರಸಭೆ ಚುನಾವಣೆಯಲ್ಲಿ ಪಕ್ಷ ಮೊದಲ ಬರಿಗೆ ಒಂದು ಸ್ಥಾನ ಪಡೆದಿದೆ. ಮುಂಬರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿಗೆ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆಲ್ಲಬೇಕಾದರೆ ಈಗಿನಿಂದಲೇ ಸಂಘಟಿತ ಪ್ರಯತ್ತ ಮಾಡಬೇಕಾಗಿದೆ’ ಎಂದು ಹೇಳಿದರು.

ನೇಮಕಗೊಂಡ ಪದಾಧಿಕಾರಿಗಳು: ನಂದಿಗುಂದ ವೆಂಕಟೇಶ್ ರಾಜ್ಯ ಕಾರ್ಯದರ್ಶಿ, ತಿಮ್ಮ ರಾಜು ಜಿಲ್ಲಾ ಸಂಯೋಜಕ, ಮುನಿಕೃಷ್ಣ ಜಿಲ್ಲಾ ಅಧ್ಯಕ್ಷ, ರಾಜಣ್ಣ ಬಾಹಿಚಾರ್ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ, ಎಂ. ಮೂರ್ತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಿ.ಬಸವರಾಜು ಉಪಾಧ್ಯಕ್ಷ, ನರಸಿಂಹರಾಜು ಖಜಾಂಚಿ, ಮುನಿರಾಜು ಕಾರ್ಯದರ್ಶಿ, ಸಿ. ಮುನಿಯಪ್ಪ, ನರಸಿಂಹಮೂರ್ತಿ, ವೆಂಕಟಸ್ವಾಮಿ, ಪೂಜಪ್ಪ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು.

ರಮಾದೇವಿ ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷೆ, ಗಣೇಶ್ ಬಿ.ವಿ.ಎಫ್ ಜಿಲ್ಲಾ ಘಟಕ ಅಧ್ಯಕ್ಷ, ಅಶೋಕ್ ಬಿ.ವಿ.ಎಫ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವನಹಳ್ಳಿ ತಾಲ್ಲೂಕು ಘಟಕ, ಮುನಿನಿರಾಜು, ನಾರಾಯಣಸ್ವಾಮಿ, ಸಂಯೋಜಕರು, ಬಂಗಾರಪ್ಪ ಅಧ್ಯಕ್ಷ, ಹನುಮಂತೇಗೌಡ ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷ , ಆಂಜಿನಪ್ಪ ಹೊಸಕೋಟೆ ತಾಲ್ಲೂಕು ಅಧ್ಯಕ್ಷ, ಮಹದೇವ್ ನೆಲಮಂಗಲ ತಾಲ್ಲೂಕು ಅಧ್ಯಕ್ಷ, ದೇವನಹಳ್ಳಿ ತಾಲ್ಲೂಕು ಬಾಹಿಚಾರ್ ಸಮಿತಿ ಅಧ್ಯಕ್ಷ ಮುನೇಗೌಡ, ಮಹಿಳಾ ಘಟಕ ಅಧ್ಯಕ್ಷ ಜಯಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಶೋಭಾ.

Post Comments (+)