ದೊಡ್ಡಬಳ್ಳಾಪುರ: ಮಕ್ಕಳಿಗೆ ಪಠ್ಯ ಬೋಧನಿಗೆ ರಂಗಬೋಧನೆಯೊಂದಿಗೆ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕ ಸಿ.ವಿ. ಲೋಕೇಶ್ ಅವರಿಗೆ ನಾಟಕ ಅಕಾಡೆಮಿ ಗೌರವ ಸಂದಿದೆ. ಕರ್ನಾಟಕ ನಾಟಕ ಅಕಾಡೆಮಿಯ 2025-26ನೇ ಸಾಲಿನ ‘ಕೆ. ರಾಮಚಂದ್ರಯ್ಯ ದತ್ತಿ’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ತಾಲ್ಲೂಕಿನ ಚನ್ನವೀರನಹಳ್ಳಿ ಗ್ರಾಮದ ಸಿ.ವಿ.ಲೋಕೇಶ್ ಅವರು, ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಲೋಕೇಶ್ ನಾಟಕರಾರರು ಹೌದು.

ಚನ್ನವೀರನಹಳ್ಳಿ ಗ್ರಾಮದ ಸಿ.ವಿ.ಲೋಕೇಶ್ ಅವರು, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಂಗಭೂಮಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಮಕ್ಕಳ ರಂಗಭೂಮಿ, ಜಾನಪದ ಕಲೆಗಳನ್ನು ಮಕ್ಕಳಲ್ಲಿ ಬಿತ್ತುತ್ತಾ ತಾಲ್ಲೂಕು, ಜಿಲ್ಲಾ, ಮತ್ತು ರಾಜ್ಯಮಟ್ಟದಲ್ಲಿ ಭಾಗವಹಿಸುವಂತೆ ತರಬೇತಿ ನೀಡುತ್ತ ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ರಂಗಭೂಮಿಯಲ್ಲಿ ನಟರಾಗಿ, ನಿರ್ದೇಶಕ, ಹಿನ್ನೆಲೆ ಗಾಯಕರಾಗಿಯು ವಿವಿಧ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದವರೆಗೂ ಪ್ರತಿನಿಧಿಸಿದ್ದಾರೆ.

ಸಿ.ವಿ.ಲೋಕೇಶ್ ಅವರು ನಿರ್ದೇಶನ ಮಾಡಿದ್ದ ಕಾಕೋಳು ಸರೋಜಮ್ಮ ಅವರ ‘ಪಾಂಚಜನ್ಯ’ ನಾಟಕವು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಾಗೂ ರಾಜ್ಯ ಮಟ್ಟದ ಮಕ್ಕಳ ನಾಟಕೋತ್ಸವದಲ್ಲಿ ಪ್ರದರ್ಶಿತವಾಗಿ ‘ಅತ್ಯುತ್ತಮ ನಟಿ’ ಮತ್ತು ‘ಅತ್ಯುತ್ತಮ ನಿರ್ದೇಶಕ’ ವಿಭಾಗಳಲ್ಲಿ ಪ್ರಥಮ ಬಹುಮಾನ ಪಡೆದಿದೆ. ಇದೇ ನಾಟಕವು ಬೆಂಗಳೂರು ದೂರದರ್ಶನದ ಚಂದನವಾಹಿನಿಯಲ್ಲಿ ಚಿತ್ರೀಕರಣಗೊಂಡು ಹಲವಾರು ಬಾರಿ ಪ್ರದರ್ಶನಗೊಂಡಿದೆ.

ಶಿವಮೊಗ್ಗದ ರಂಗಾಯಣದಲ್ಲಿ ನಡೆದ ರಾಜ್ಯಮಟ್ಟದ ನಾಟಕೋತ್ಸವದಲ್ಲಿ ಸಿ.ವಿ.ಲೋಕೇಶ್ ಅವರು ನಿರ್ದೇಶಿಸಿದ್ದ ಎರಡು ನಾಟಕಗಳು ಪ್ರದರ್ಶನಗೊಂಡಿವೆ. ಸ್ನೇಹಿತರೊಂದಿಗೆ ಶ್ರಮಣ ಸಂಸ್ಕೃತಿ ಟ್ರಸ್ಟ್ ಸ್ಥಾಪಿಸಿಕೊಂಡು ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಚನ್ನವೀರನಹಳ್ಳಿ ಗ್ರಾಮದಲ್ಲಿ ಸುಸಜ್ಜಿತ ‘ಶ್ರಮಣ ಶ್ರದ್ಧಾ ಕೇಂದ್ರ’ವೆಂಬ ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪಿಸಿ ಸುಮಾರು 8 ಹಳ್ಳಿಯ ಮಕ್ಕಳಿಗೆ ಓದುವ ಕೈಗೆ ಪುಸ್ತಕ ಕೊಡಬೇಕೆಂಬ ಮಹತ್ವಾಕಾಂಕ್ಷೆಯಡಿ ಅಕ್ಷರ ಕ್ರಾಂತಿಗೆ ಮುನ್ನಡಿ ಬರೆದಿದ್ದಾರೆ.

ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಾಗೂ ರಂಗಭೂಮಿ ಕ್ಷೇತ್ರಗಳ ಪಯಣದಲ್ಲಿನ ಲೋಕೇಶ್ ಅವರ ಸೇವೆಯನ್ನು ಪರಿಗಣಿಸಿ ಚಿತ್ರದುರ್ಗದ ಮುರುಘಾ ಮಠದಿಂದ ಶರಣ ಚೇತನ ಸೇರಿದಂತೆ ಶಿಕ್ಷಕ ಶ್ರೀ, ಕನಕಶ್ರೀ ಪ್ರಶಸ್ತಿಗಳಲ್ಲದೆ ಹೊಂಬಾಳೆ ಪ್ರತಿಭಾ ರಂಗದ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.