ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ 8 ಹಂತಗಳಲ್ಲಿ ವಿಸ್ತಾರಣೆಯಾಗಿದೆ. ಮೊಬೈಲ್ ತಯಾರಿಕ ಫಾಕ್ಸ್‌ಕಾನ್ ಘಟಕ ಸ್ಥಾಪನೆಯಾದ ನಂತರ ನಗರದಲ್ಲಿ ವಾಸ ಮಾಡುವ ಜನ ಸಂಖ್ಯೆ 2 ಲಕ್ಷ ಮೀರುತ್ತಿದೆ. ಇಲ್ಲಿನ ಜನ ಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ದೊರೆಯಬೇಕು. 2018-19ನೇ ಸಾಲಿನಲ್ಲಿ ₹8 ಕೋಟಿ ವಿಶೇಷ ಅನುದಾನ ಹೊರತು ಇದುವರೆಗೂ ಯಾವುದೇ ಅನುದಾನ ನೀಡಿಲ್ಲ. ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಜನಸಂಖ್ಯೆ ಆಧಾರದ ಮೇಲೆ ವಿಶೇಷ ಅನುದಾನ ನೀಡಬೇಕು. ಈ ನಿಯಮ ಇಲ್ಲಿಗೆ ಅನ್ವಯವೇ ಆಗುತ್ತಿಲ್ಲ.
ವಿ.ಎಸ್.ರವಿಕುಮಾರ್‌ಅಧ್ಯಕ್ಷ ದೊಡ್ಡಬಳ್ಳಾಪುರ ನಗರಸಭೆ ಸ್ಥಾಯಿ ಸಮಿತಿ