ಆನೇಕಲ್: ತಾಲ್ಲೂಕಿನ ಬಿದರಗುಪ್ಪೆಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಬುಧವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ಕೆಂಪೇಗೌಡರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ ರಾಜ್ಯ ಒಕ್ಕಲಿಗರ ಜಾಗೃತಿ ಸಂಘದ ರಾಜ್ಯ ಅಧ್ಯಕ್ಷ ಮುನಿರಾಜು ಗೌಡ, ಕೆಂಪೇಗೌಡರು ಸರ್ವರಿಗೂ ಸಮಪಾಲು ಮತ್ತು ಸಮಬಾಳು ತತ್ವದ ಅಡಿ ಆಳ್ವಿಕೆ ನಡೆಸಿದ ದೊರೆ ಮತ್ತು ಸಮರ್ಥ ಆಡಳಿತಗಾರ ಎಂದರು.

ಕೆಂಪೇಗೌಡರು ದೂರದೃಷ್ಠಿಯ ನಾಯಕರಾಗಿದ್ದರು. ಉದ್ಯಾನವನಗಳು, ಸುಸಜ್ಜಿತ ಮಾರುಕಟ್ಟೆ, ಅತ್ಭುತ ನಗರಗಳನ್ನು ನಿರ್ಮಿಸುವ ಮೂಲಕ ನಗರ ಯೋಜನೆಯಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಕೆಂಪೇಗೌಡರುಕಟ್ಟಿಸಿದ ಕೆರೆಗಳ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದರು.

ಅತ್ತಿಬೆಲೆ ಪೊಲೀಸ್ ಇನ್ಸ್ಪೆಕ್ಟರ್ ರಾಘವೇಂದ್ರ, ಬಿ.ಆರ್.ಮೂರ್ತಿ, ಬಿದರಗುಪ್ಪೆ ರಾಜೇಶ್, ವಿಜಯ್ ಶ್ರೀರಾಮಯ್ಯ, ಚೆನ್ನಪ್ಪ, ನರೇಂದ್ರ ಬಾಬು, ಶಂಕರರೆಡ್ಡಿ, ಶಿವಕುಮಾರ್, ಕೃಷ್ಣಮೂರ್ತಿ, ಮೋಹನ್, ರಾಮಮೂರ್ತಿ, ತಿಮ್ಮರಾಯಪ್ಪ, ಆನಂದ್, ಮಂಜುನಾಥ್, ಪಾಪುಪತಿ, ಮಂಜುನಾಥ್, ನಾಗೇಶ್, ಮುರಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.