ಪ್ರಜಾವಾಣಿ ವಾರ್ತೆ

ಸೂಲಿಬೆಲೆ(ಹೊಸಕೋಟೆ): ಸೂಲಿಬಲೆ ಹೋಬಳಿಯ ಚಿಕ್ಕಕೋಲಿಗ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸಮಾಜ ಸೇವಕ ದೊಡ್ಡಕೋಲಿಗ ಶಿವಕುಮಾರ್ ನೋಟ್ ಬುಕ್ ಹಾಗೂ ಕಲಿಕಾ ಸಾಮಗ್ರಿ ವಿತರಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯಗಳ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯವಿರುವ ಪಠ್ಯ ಮತ್ತು ಪಕ್ಷೇತರ ಚಟುವಟಿಕೆಗಳ ಕಲಿಕೋಪಕರಣಗಳು ಅತವಶ್ಯಕವಾಗಿದ್ದು ದಾನಿಗಳನೆರವು ಸಹ ಅತ್ಯಗತ್ಯ ಎಂದು ಹೇಳಿದರು.

ಸಮಾಜದಲ್ಲಿ ಉಳ್ಳವರು ಹಲವಾರು ದುಂದು ವೆಚ್ಚಗಳಿಗೆ ಹಣ ವ್ಯಯ ಮಾಡುತ್ತಾರೆ. ಆದರೆ ವ್ಯಯ ಮಾಡುವ ಹಣವನ್ನು ಸರ್ಕಾರಿ ಶಾಲೆಯ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಬಳಕೆಯಾಗಬೇಕು ಎಂದರು.

ಯುವ ಮುಖಂಡರಾದ ಸಂತೋಷ್, ಶಾಲೆಯ ಮುಖ್ಯ ಶಿಕ್ಷಕ ಈಶ್ವರಪ್ಪ ಪೂಜಾರಿ, ಮುಖಂಡರಾದ ಕೃಷ್ಣಪ್ಪ, ಜಯಂತ್ ಯಾದವ್, ಶ್ರೀಧರ್, ದೇವರಾಜು, ಶಶಿಕುಮಾರ್, ಸುಬ್ಬು, ಭರತ್, ಪ್ರತಾಪ್, ಮಹಾಂತೇಶ, ಅಂಗನವಾಡಿ ಕಾರ್ಯಕರ್ತೆ ಸುಧಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.