ಅಂಗನವಾಡಿ ಕೇಂದ್ರಕ್ಕೆ ಬೀಗಹಾಕಿ ಕರ್ತವ್ಯಕ್ಕೆ ಅಡ್ಡಿ

ಗುರುವಾರ , ಮಾರ್ಚ್ 21, 2019
32 °C

ಅಂಗನವಾಡಿ ಕೇಂದ್ರಕ್ಕೆ ಬೀಗಹಾಕಿ ಕರ್ತವ್ಯಕ್ಕೆ ಅಡ್ಡಿ

Published:
Updated:
Prajavani

ಮಾಡಬಾಳ್‌(ಮಾಗಡಿ): ‘ಅಂಗನವಾಡಿ ಕಾರ್ಯಕರ್ತೆಯ ಹುದ್ದೆ ನಮ್ಮ ಕಡೆಯವರಿಗೆ ಸಿಕ್ಕಿಲ್ಲ ಎಂದು ಆರೋಪಿಸಿದ ವ್ಯಕ್ತಿಯೊಬ್ಬರು ಅಂಗನವಾಡಿ ಕೇಂದ್ರಕ್ಕೆ ಬೀಗಹಾಕಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಶಂಭೂದೇವನಹಳ್ಳಿಯಲ್ಲಿ ನಡೆದಿದೆ’ ಎಂದು ಶಿಶು ಅಭಿವೃದ್ಧಿ ಅಧಿಕಾರಿ ಭಾರತೀದೇವಿ ತಿಳಿಸಿದ್ದಾರೆ.

ಈ ಕೇಂದ್ರದಲ್ಲಿ ಖಾಲಿ ಇದ್ದ ಕಾರ್ಯಕರ್ತೆಯರ ಹುದ್ದೆಗೆ ಕಾನೂನು ರೀತಿ ಜಿಲ್ಲಾಧಿಕಾರಿ ಅರ್ಜಿ ಕರೆದು ವಿಧವೆ ಪೂರ್ಣಿಮಾ ಎಂಬಾಕೆಯನ್ನು ನೇಮಕ ಮಾಡಿದ್ದರು. ನೇಮಕಾತಿ ಪಡೆದು ಎರಡು ದಿನ ಅಂಗನವಾಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಶುಕ್ರವಾರ ಶಿವಕುಮಾರ್‌, ಕಾರ್ಯಕರ್ತೆಯ ಹುದ್ದೆ ನಮ್ಮ ಕಡೆಯವರಿಗೆ ಸಿಗಬೇಕಿತ್ತು ಎಂದು ಆರೋಪಿಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ, ಕೇಂದ್ರಕ್ಕೆ ಬೀಗ ಹಾಕಿದ್ದಾರೆ ಎಂದಿದ್ದಾರೆ.

‘ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರಲ್ಲಿ ಪ್ರಸ್ತಾಪಿಸಿದೆ. 30 ವರ್ಷಗಳಿಂದ ಅಲ್ಲಿ ಸಮುದಾಯ ಭವನವಿದೆ. ಸಾರ್ವಜನಿಕರು ಬಳಸಿಕೊಳ್ಳುತ್ತಿದ್ದಾರೆ. ಅಂದಿನಿಂದಲೂ ಅಂಗನವಾಡಿ ಕೇಂದ್ರವು ಸಹ ನಡೆದಿದೆ. ಬೀಗ ಹಾಕಿದಾತ ಫೋನ್‌ಗೆ ಸಿಕ್ಕಲಿಲ್ಲ. ಶನಿವಾರ ಹಾಕಿರುವ ಬೀಗ ತೆರೆಯದಿದ್ದರೆ, ಪೊಲೀಸರಿಗೆ ದೂರು ಸಲ್ಲಿಸಿ, ಬೀಗ ಒಡೆದು ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಬಿಡಲಾಗುವುದು’ ಎಂದು ಶಿಶು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !