ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: ನಿಯಂತ್ರಣ ತಪ್ಪಿ ಕೆಳಗೆ ಉರುಳಿದ ತೇರು

Published 6 ಏಪ್ರಿಲ್ 2024, 10:11 IST
Last Updated 6 ಏಪ್ರಿಲ್ 2024, 10:11 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಗೆ ಶನಿವಾರ ತೆರಳುತ್ತಿದ್ದ ಹೀಲಲಿಗೆ ಗ್ರಾಮದ 160 ಅಡಿ ಎತ್ತರದ ತೇರು ಆಯತಪ್ಪಿ ನೆಲಕ್ಕುರುಳಿದೆ. ತೇರು ಕೆಳಗೆ ಉರುಳುತ್ತಿದ್ದಂತೆ ಭಕ್ತರು ಓಡಿ, ಅಪಾಯದಿಂದ ಪಾರಾಗಿದ್ದಾರೆ.

ಸುಮಾರು 60 ಜತೆ ಎತ್ತು ಮತ್ತು ಟ್ರ್ಯಾಕ್ಟರ್‌ ಮೂಲಕ ತೇರು ಎಳೆದು ತರಲಾಗುತ್ತಿತ್ತು. ತೇರಿನ ನಾಲ್ಕು ದಿಕ್ಕುಗಳಲ್ಲಿಯೂ ಹಗ್ಗಕಟ್ಟಿ ಸಮತೋಲನದಿಂದ ಎಳೆಯಲಾಗುತ್ತಿತ್ತು. ಹೀಲಲಿಗೆಯಿಂದ ಎರಡು ಕಿ.ಮೀ ದೂರ ತೇರು ಸಾಗುತ್ತಿತು. ಅಲ್ಲಿ ತಿರುವು ಬರುತ್ತಿದ್ದಂತೆ ತೇರಿನ ಒಂದು ಚಕ್ರ ಡಾಂಬರು ರಸ್ತೆಯಿಂದ ಮಣ್ಣಿನ ರಸ್ತೆಗೆ ಇಳಿಯಿತು. ಹೆಚ್ಚು ಭಾರವಿದ್ದ ತೇರಿನ ಚಕ್ರ ಮಣ್ಣಿನಲ್ಲಿ ಹೂತುಕೊಂಡಿತು. ಇದರಿಂದಾಗಿ ಸಮತೋಲನ ತಪ್ಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT