ದೊಡ್ಡಬಳ್ಳಾಪುರ: ಕಾಣೆಯಾಗಿದ್ದ ಬಾಲಕ ತಾಲ್ಲೂಕಿನ ಸಾಧುಮಠ ರಸ್ತೆಯ ಬದಿಯಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾನೆ.

ತಾಲ್ಲೂಕಿನ ದೊಡ್ಡರಾಯಪ್ಪನಹಳ್ಳಿ ನಿವಾಸಿ ಎನ್.ನಿಶಾಂಕ್(15)ಮೃತ ಬಾಲಕ.

ನಿಶಾಂಕ್ ಡಿ.15 ರಂದು ಬೆಳಿಗ್ಗೆ 7.30ಗಂಟೆಗೆ ಮನೆಯಿಂದ ಊರಿನ ಒಳಗೆ ಹೋಗಿಬರುತ್ತೇನೆಂದು ಬೈಕ್ ತೆಗೆದುಕೊಂಡು ಹೋದವನು ವಾಪಸ್ಸು ಮನೆಗೆ ಬಂದಿರಲಿಲ್ಲ. ಕಾಣೆಯಾದ ಮಗ ನಿಶಾಂಕ್ ಪತ್ತೆಗಾಗಿ ತಂದೆ ನಾರಾಯಣಸ್ವಾಮಿ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ಕುರಿತಂತೆ ಪೊಲೀಸರು,ಕರಪತ್ರಗಳ ಮುದ್ರಿಸಿ ತೀವ್ರ ಹುಡುಕಾಟ ನಡೆಸಿದ್ದರು. ಆದರೆ ನಿಶಾಂಕ್ ಕಾಣೆಯಾದ 12 ದಿನಗಳ ನಂತರ ಇಂದು ಆತನ ಮೃತ ದೇಹ ಚಿಕ್ಕರಾಯಪ್ಪನಹಳ್ಳಿ ಮಾರ್ಗದ ಸಾಧುಮಠ ರಸ್ತೆಯಲ್ಲಿ ಸಮೀಪ ಪತ್ತೆಯಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.