ಆಸ್ತಿ ಕಬಳಿಸಲು ಕೊಲೆ: ಆರೋ‍ಪ‍

7

ಆಸ್ತಿ ಕಬಳಿಸಲು ಕೊಲೆ: ಆರೋ‍ಪ‍

Published:
Updated:
ಕೊಲೆ ಶಂಕೆ ಹಿನ್ನೆಲೆಯಲ್ಲಿ ಬಿದಲೂರು ಗ್ರಾಮದ ಬಳಿ ಶವವನ್ನು ಹೊರ ತೆಗೆಯಲಾಯಿತು

ದೇವನಹಳ್ಳಿ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸೋದರನ ಕೊಲೆ ನಡೆದಿದೆ ಎಂದು ಶಂಕೆ ವ್ಯಕ್ತಪಡಿಸಿ ಸೋದರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಮೃತ ದೇಹವನ್ನು ಪೊಲೀಸರು ಹೊರತೆಗೆದು ಪರಿಶೀಲನೆಗೆ ಒಳಪಡಿಸಿದರು.

ವಿಶ್ವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಿದಲೂರು ಗ್ರಾಮದ ಆನಂದ್‌ ಎಂಬುವರು ಜೂನ್ 21ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದಕ್ಕೂ ಮೊದಲು ಅವರ ತಾಯಿ ಮುನಿಬಸಮ್ಮ ಎಂಬುವರು ಕೂಡ ಹೃದಯಾಘಾತದಿಂದ ಸಾವನ್ನಪ‍್ಪಿದ್ದರು. ಆದರೆ, ಸೋದರನ ಸಾವು ಅನುಮಾನಸ್ಪದಿಂದ ಕೂಡಿದೆ ಎಂದು ಮೃತನ ಸೋದರಿ ಶೋಭಾ ಎಂಬುವರು ದೂರು ಸಲ್ಲಿಸಿದ್ದರು.

‘ಆನಂದ್ ಗೆ ಕಳೆದ ಎರಡು ತಿಂಗಳ ಹಿಂದೆ ಚಿಂತಾಮಣಿ ತಾಲ್ಲೂಕಿನ ಹೊಸಳ್ಳಿ ಗ್ರಾಮದ ಮೋನಿಕಾ ಎಂಬ ಯುವತಿಯೊಂದಿಗೆ ವಿವಾಹವಾಗಿತ್ತು. ತಂದೆ ಲೋಕೇಶ್ ಅವರಿಗೆ ಇಬ್ಬರು ಪತ್ನಿಯರು. ಮೃತ  ಆನಂದ್ ಹಾಗೂ ಶೋಭಾ ಆದ ನಾನು ಮೊದಲ ಪತ್ನಿ ಮುನಿಬಸಮ್ಮ ಅವರ ಮಕ್ಕಳು. ಎರಡನೇ ‍‍ಪತ್ನಿ ಲೀಲಮ್ಮಗೆ ಅಂಬರೀಷ್, ರೂಪಾ ಮಕ್ಕಳಿದ್ದಾರೆ. ಆನಂದ್‌ ಪತ್ನಿ ಮೋನಿಕಾ, ತಂದೆ ಲೋಕೇಶ್‌ ಮತ್ತು ಎರಡನೇ ಪತ್ನಿ ಪುತ್ರ ಅಂಬರೀಷ್ ಆಸ್ತಿ ಕಬಳಿಸುವ ದುರದ್ದೇಶದಿಂದ ಕೊಲೆ ಮಾಡಿಸಿರುವ ಶಂಕೆ’ ಎಂದು ಶೋಭಾ ಆರೋಪಿಸಿದ್ದಾರೆ.

ವೃತ್ತ ನಿರೀಕ್ಷಕ ಮಂಜುನಾಥ್, ತಹಶೀಲ್ದಾರ್ ಎಂ.ರಾಜಣ್ಣ, ಸಬ್ ಇನ್‌ಸ್ಪೆಕ್ಟರ್ ಲೂಯಿರಾಮಿರೆಡ್ಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !