ಸೂಲಿಬೆಲೆ (ಹೊಸಕೋಟೆ): ಜಾಗತೀಕರಣದ ಸಂದರ್ಭದಲ್ಲೂ ಮೌಢ್ಯ ಇನ್ನೂ ಜೀವಂತ ಇರುವುದು ದುರಂತ. ಇಂದಿನ ಯುವ ಪೀಳಿಗೆಗೆ ವೈಜ್ಞಾನಿಕ ದೃಷ್ಟಿಕೋನ ಇಲ್ಲವೆಂದರೆ ಸಮಾಜ ಜಡ್ಡುಗಟ್ಟುವ ಸಂಭವ ಇರುತ್ತದೆ. ಪ್ರತಿಯೊಬ್ಬರೂ ವಿಜ್ಞಾನವನ್ನು ಜೀವನದ ಭಾಗವಾಗಿ ಅಳವಡಿಸಿಕೊಳ್ಳಬೇಕಿದೆ ಎಂದು ರಾಜ್ಯ ವೈಜ್ಞಾನಿಕ ವಿಜ್ಞಾನ ಪರಿಷತ್ ಜಿಲ್ಲಾ ಉಪಾಧ್ಯಕ್ಷ ತರಬಹಳ್ಳಿ ಮಂಜುನಾಥ್ ಹೇಳಿದರು.

ತಾಲ್ಲೂಕಿನ ಸೂಲಿಬೆಲೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ವಿಜ್ಞಾನ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂದು ವಿಜ್ಞಾನ ಎಂಬುದು ಜೀವನದ ಒಂದು ಅವಿಭಾಜ್ಯ ಅಂಗವಾಗಿ ಬದಲಾದಾಗ ಮಾತ್ರವೇ ದೇಶಕ್ಕೆ ಗರಿಮೆ ಬರಲು ಸಾಧ್ಯ ಎಂದರು.

ಸೂಲಿಬೆಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ವೆಂಕಟೇಶ್, ವಿಜ್ಞಾನ ಶಿಕ್ಷಕ ಅಚ್ಚುತ್, ಸಮಿತಿಯ ಜಿಲ್ಲಾಧ್ಯಕ್ಷ ಎಂ.ಆರ್.ಉಮೇಶ್., ತಾಲ್ಲೂಕು ಅಧ್ಯಕ್ಷ ರವಿಕುಮಾರ್, ಹೋಬಳಿ ಅಧ್ಯಕ್ಷ ನಯಾಜ್ ಖಾನ್, ಮಹಿಳಾ ಅಧ್ಯಕ್ಷೆ ಪದ್ಮಾವತಿ, ಕಸಾಪ ಅಧ್ಯಕ್ಷ ಪ್ರೇಮಕುಮಾರ್, ಮಾನವ ಹಕ್ಕುಗಳ ಅಧ್ಯಕ್ಷೆ ರಾಜೇಶ್ವರಿ, ಸೈಯದ್ ಮಹಬೂಬ್, ಜಿಯಾವುಲ್ಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.