ವಿಜಯಪುರ (ದೇವನಹಳ್ಳಿ): ಇಲ್ಲಿನ ಮಂಡಿಬೆಲೆ ರಸ್ತೆಯ ತೋಟದಲ್ಲಿ ಸಂಕ್ರಾಂತಿ ಪ್ರಯುಕ್ತ ಬುಧವಾರ ಸಾವಯವ ಕೃಷಿ- ಸುಗ್ಗಿ ಸಂಭ್ರಮ ಆಯೋಜಿಸಲಾಗಿತ್ತು.

ಭತ್ತ ಮತ್ತು ರಾಗಿ ರಾಶಿಗೆ ತಳಿರು ತೋರಣಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಲಾಯಿತು. ಜಾನುವಾರು ಪೂಜೆ, ಜಾನುವಾರು ಕಿಚ್ಚು ಹಾಯಿಸುವಿಕೆ ನಂತರ ಸಾಂಪ್ರಾದಾಯಿಕ ಉಡುಗೆಯಲ್ಲಿದ್ದ ಜನರು ಎಳ್ಳು,ಬೆಲ್ಲ ವಿನಿಮಯ ಮಾಡಿಕೊಂಡರು.

ಎತ್ತಿನಬಂಡಿ ಸವಾರಿ, ಜಾನಪದ ಗೀತೆ ಗಾಯನ, ನೃತ್ಯ ಪ್ರದರ್ಶನ, ರಂಗೋಲಿ ಸ್ಪರ್ಧೆ, ಮಡಿಕೆ ಒಡೆಯುವ ಸ್ಪರ್ಧೆ, ಗಾಳಿಪಟ, ಪಂಜು ತಿರುಸುವಿಕೆ ಹಬ್ಬದ ಸಂಭ್ರಮ ಇಮ್ಮಡಿಗೊಳಿಇಸಿದವು. ಸೋರಪಲ್ಲಿ ಚಂದ್ರಶೇಖರ್ ಅವರು ಗ್ರಾಮೀಣ ಸಂಸ್ಕೃತಿಯ ಜಾನಪದ ಗೀತೆಗಳನ್ನು ಹಾಡಿದರು.

ತೋಟದ ಮಾಲೀಕ ವಿಎಸ್ಆರ್ ರಮೇಶ,ಸಾವಯವ ಕೃಷಿಕ ಬೋದಗೂರು ವೆಂಕಟಶಾಮರೆಡ್ಡಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಅಂಬರೀಶ್ ಗೌಡ, ಬಿ.ಕೆ.ದಿನೇಶ್,ಆವತಿ ಗ್ರಾಮದ ಅನಿಲ್, ವೆಂಕಟೇಶ್, ಹಾರೋಹಳ್ಳಿಯ ಕೃಷ್ಣಮೂರ್ತಿ, ಅಟ್ಟೂರಿನ ಸೋಮಶೇಖರ್, ರಮೇಶ್, ಧರ್ಮಪುರದ ವೀರಭದ್ರ, ನಕ್ಕನಹಳ್ಳಿಯ ಪ್ರಸಾದ್, ನಡುಪನಾಯಕನಹಳ್ಳಿಯ ಶ್ರೀಧರ್, ಅರಿಕೆರೆಯ ನಾರಾಯಣಸ್ವಾಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.