ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಪ್ರಣಾಳಿಕೆ ಜನ ನಂಬಲ್ಲ: ಸಚಿವ ಕೆ.ಎಚ್.ಮುನಿಯಪ್ಪ

Published 16 ಏಪ್ರಿಲ್ 2024, 5:15 IST
Last Updated 16 ಏಪ್ರಿಲ್ 2024, 5:15 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಬಿಜೆಪಿ ಬಿಡುಗಡೆಗೊಳಿಸಿರುವ ಪ್ರಣಾಳಿಕೆಯನ್ನು ಜನರು ನಂಬುವುದಿಲ್ಲ. ಈಗಾಗಲೇ ಜನರಿಗೆ ಸುಳ್ಳು ಹೇಳಿ ಎರಡು ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಈ ಬಾರಿಯೂ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಮುದ್ರಾ ಯೋಜನೆ ಜಾರಿಗೆ ತಂದರು. ಇದರಿಂದ ರೈತರು ಸೇರಿದಂತೆ ಯಾರಿಗೂ ಏನು ಪ್ರಯೋಜನವಾಗಿಲ್ಲ. ಜನರಿಂದ ಬ್ಯಾಂಕ್ ಖಾತೆಯನ್ನು ತೆರೆಸಿದರು. ಇದರಿಂದಲೂ ಉಪಯೋಗವಾಗಲಿಲ್ಲ ಎಂದು ಟೀಕಿಸಿದರು.

ಜನಧನ್ ಯೋಜನೆಯಡಿ ಖಾತೆ ತೆರೆಯುವಂತೆ ಹೇಳಿದಾಗ ನಮ್ಮ ಖಾತೆಗೆ ₹15 ಲಕ್ಷ ಹಣ ಬರುತ್ತದೆ ಎಂದು ಜನ ಉತ್ಸಾಹದಲ್ಲಿದ್ದರು. ಆದರೆ ಇದುವರೆಗೆ ನಯಾಪೈಸೆ ಬರಲಿಲ್ಲ. ಬದಲಿಗೆ ನೋಟ್ ಬ್ಯಾನ್ ಮಾಡಿ, ಹೊರೆ ಹೊರೆಸಿದರು. ಸಿಲಿಂಡರ್, ಅಗತ್ಯ ವಸ್ತುಗಳು, ರಸಗೊಬ್ಬರಗಳ ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದರು ಎಂದು ದೂರಿದರು.

ಎಚ್.ಡಿ.ಕುಮಾರಸ್ವಾಮಿ ಅವರ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆ ಪ್ರತಿಕ್ರಿಯಿಸಿದ ಅವರು, ಮಹಿಳೆಯರು ಯಾವ ವಿಚಾರದಲ್ಲಿ ದಾರಿ ತಪ್ಪಿದ್ದಾರೆ ಎನ್ನುವುದನ್ನು ಕುಮಾರಸ್ವಾಮಿ ಅವರನ್ನೆ ಕೇಳಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT