ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ಮದ್ಯಕ್ಕೆ ಮುಗ್ಗಿ ಬಿದ್ದ ಗ್ರಾಹಕರು

Published 28 ಏಪ್ರಿಲ್ 2024, 5:53 IST
Last Updated 28 ಏಪ್ರಿಲ್ 2024, 5:53 IST
ಅಕ್ಷರ ಗಾತ್ರ

ದೇವನಹಳ್ಳಿ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಗುರುವಾರದಿಂದ ತಾಲ್ಲೂಕಿನಾದ್ಯಂತ ಬಾಗಿಲು ಹಾಕಿದ್ದ ಮದ್ಯದಂಗಡಿಗಳು ಶನಿವಾರ ತೆರೆದಿದ್ದು, ಮದ್ಯ ಪ್ರಿಯರು ನೆಚ್ಚಿನ ಮದ್ಯ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಕಂಡು ಬಂತು.

ಎರಡು ದಿನಗಳಿಂದ ಮದ್ಯ ಇಲ್ಲದೇ ಹಪಾಹಪಿಸುತ್ತಿದ್ದವರು ಮದ್ಯದ ಅಂಗಡಿ ತೆರೆದ ತಕ್ಷಣವೇ ದಾಂಗುಡಿ ಇಟ್ಟಿದ್ದು, ಇನ್ನೆರಡು ದಿನಕ್ಕೆ ಬೇಕಾಗುವಷ್ಟು ಮದ್ಯವನ್ನು ಪಾರ್ಸಲ್ ತೆಗೆದುಕೊಂಡು ಹೋಗುತ್ತಿದ್ದಾರೆ.

ರಜೆ ಇರುವ ಕಾರಣ, ಬಿಸಿಲಿನ ತಾಪಮಾನಕ್ಕೆ ಮದ್ಯ ಪ್ರಿಯರು ಬಿಯರ್‌ ಮೊರೆ ಹೋಗಿದ್ದಾರೆ.

ವಾರಾಂತ್ಯಕ್ಕೆ ಸ್ನೇಹಿತರೊಂದಿಗೆ ಕಾಲ ಕಳೆಯಲು ಈಜು ಕೊಳಕ್ಕೆ ಹೋಗುತ್ತಿರುವ ಯುವಕರ ದಂಡು, ಈಜು ಸುಸ್ತಾಗಿ ಸಂಜೆ ವೇಳೆಗೆ ಮೋಜಿಗಾಗಿ ಬಾರ್‌ ಮತ್ತು ರೆಸ್ಟೋರೆಂಟ್‌ಗಳ ಮುಂದೆ ಸೇರುತ್ತಿದ್ದ ದೃಶ್ಯಗಳು ಕಂಡು ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT