ಆನೇಕಲ್‌ನಲ್ಲಿ ಹಬ್ಬಕ್ಕೆ ಭರದ ಸಿದ್ಧತೆ: ಗಗನಕ್ಕೇರಿದ ಹೂವಿನ ಬೆಲೆ

ಆನೇಕಲ್: ತಾಲ್ಲೂಕಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಭರದ ಸಿದ್ಧತೆ ನಡೆದಿದೆ. ಸಂಪ್ರದಾಯದಂತೆ ಆಚರಣೆ ಮಾಡಲು ಇಲ್ಲಿನ ಮಾರುಕಟ್ಟೆಯಲ್ಲಿ ವಿವಿಧ ಸಾಮಗ್ರಿಗಳನ್ನು ಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು.
ಹೂವು, ಹಣ್ಣು, ನೋಮುದಾರ, ಗೆಜ್ಜೆ, ಬಾಗಿನ, ಬಣ್ಣದ ದಾರ, ಮಣ್ಣಿನ ದೀಪಗಳು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಹಬ್ಬಕ್ಕಾಗಿ ಕೊಳ್ಳುವುದು ವಾಡಿಕೆ. ಒಂದು ಜೊತೆ ಬಾಗಿನದ ಮೊರ ₹ 300ಗೂ ಹೆಚ್ಚಾಗಿತ್ತು. ಹೂವಿನ ಬೆಲೆ ಗಗನಕ್ಕೇರಿತ್ತು. ಒಂದು ಮಾರು ಸೇವಂತಿಗೆ ಹೂವು ₹ 150ರಿಂದ ₹ 200ಕ್ಕೆ ಮಾರಾಟವಾಗುತ್ತಿತ್ತು.
ದೀಪಾವಳಿಯ ವಿಶೇಷ ಕಜ್ಜಾಯ ತಯಾರಿಕೆಗೆ ಅಕ್ಕಿ ಮತ್ತು ಬೆಲ್ಲ ಬಳಕೆ ಮಾಡುತ್ತಾರೆ. ಬೆಲ್ಲ ಮತ್ತು ಅಡುಗೆ ಎಣ್ಣೆಯ ಬೆಲೆಯು ಏರಿಕೆಯಾಗಿತ್ತು. ಬೆಲೆ ಏರಿಕೆಯ ನಡುವೆಯೂ ಸಾಂಪ್ರದಾಯಿಕ ಆಚರಣೆಗೆ ಅವಶ್ಯಕ ಸಾಮಗ್ರಿಗಳನ್ನು ಕೊಳ್ಳಲು ಮಾರುಕಟ್ಟೆಯಲ್ಲಿ ಜನ ಜಮಾಯಿಸಿದ್ದ ದೃಶ್ಯ ಸಂಜೆ ಕಂಡು ಬಂದಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.