ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಮಗೆರೆ ಕೆರೆ ಅಂಗಳ ಅವ್ಯವಸ್ಥೆಯ ಆಗರ

Last Updated 29 ಅಕ್ಟೋಬರ್ 2020, 4:34 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ:ಎಂದೂ ಬತ್ತದ ಕೆರೆ ಎಂದೇ ಖ್ಯಾತಿಗಳಿಸಿರುವ ತಾಲ್ಲೂಕಿನ ಗುಂಡಮಗೆರೆ ಕೆರೆ ಅಂಗಳ ಮದ್ಯದ ಬಾಟಲಿಗಳಿಂದ ತುಂಬುತ್ತಿದ್ದು, ಕುಡುಕರ ತಾಣವಾಗಿ ಪರಿಣಮಿಸಿದೆ.

ಬೆಟ್ಟದ ತಪ್ಪಲಿನ ಸುಂದರ ಪರಿಸರದಲ್ಲಿ ಇರುವ ಈ ಕೆರೆಯಲ್ಲಿ ಅರ್ಧಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿದೆ. ಕೆರೆಯ ಸುತ್ತಲು ಬೆಟ್ಟ ಹಾಗೂ ಕಿರುಚಲು ಕಾಡು ಇರುವುದರಿಂದ ಪ್ರತಿದಿನ ಬೆಂಗಳೂರು ಸೇರಿದಂತೆ ತಾಲ್ಲೂಕಿನಿಂದಲೂ ನೂರಾರು ಜನ ಕೆರೆ ವೀಕ್ಷಣೆಗೆ ಇಲ್ಲಿಗೆ ಬರುತ್ತಾರೆ.

ಬೆಟ್ಟದ ತಪ್ಪಲಿನ ಕೆರೆ ಅಂಚಿನಲ್ಲಿ ಗಾಜಿನ ಬಾಟಲಿ, ಕುಡಿಯುವ ನೀರಿನ ಪ್ಲಾಸ್ಟಿಕ್‌ ಬಾಟೆಲ್‌, ಪ್ಲಾಸ್ಟಿಕ್‌ ಕವರ್‌ಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ.

‘ಕೆರೆ ಅಂಚಿನಲ್ಲಿ ಹೊಡೆದು ಹಾಕಲಾಗಿರುವ ಗಾಜಿನ ಬಾಟಲಿಗಳ ಚೂರುಗಳು ಕೆರೆಯಲ್ಲಿ ನೀರು ಕುಡಿಯಲು ಹೋಗುವ ಕುರಿ, ಮೇಕೆ, ಹಸುಗಳು ಸೇರಿದಂತೆ ಮನುಷ್ಯರ ಕಾಲುಗಳಿಗೆ ಚುಚ್ಚಿಕೊಳ್ಳುತ್ತಿವೆ. ಕೆರೆಯಲ್ಲಿ ಬಿಸಾಡುತ್ತಿರುವ ಪ್ಲಾಸ್ಟಿಕ್‌ ಕವರ್‌ಗಳು ಜಲಚರಗಳಿಗೆ
ಕಂಟಕವಾಗಿ ಪರಿಣಮಿಸಿವೆ. ಕೆರೆ ಅಂಚಿನಲ್ಲಿ ಸಂಜೆ ವೇಳೆ ಕುಡುಕರ ಹಾವಳಿಯನ್ನು ಪೊಲೀಸರು ನಿಯಂತ್ರಿಸಿದರೆ ಮಾತ್ರ ಎಂದೂ ಬತ್ತದ ಗುಂಡಮಗೆರೆ ಕೆರೆ ಮತ್ತಷ್ಟು ವರ್ಷಗಳ ಕಾಲ ಸ್ವಚ್ಛವಾಗಿರಲು ಸಾಧ್ಯ’ ಎನ್ನುತ್ತಾರೆ ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT