ದೇವನಹಳ್ಳಿ: ಇಲ್ಲಿನ ಬೆಸ್ಕಾಂ ಕಚೇರಿ ಆವರಣದಲ್ಲಿ ಕೇಂದ್ರ ಸರ್ಕಾರದ ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ಸಿಬ್ಬಂದಿ ಕಪ್ಪು ಪಟ್ಟಿ ಚಳವಳಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬೆಸ್ಕಾಂ ಸಹಾಯಕ ಇಂಜಿಯರ್ ಶ್ರೀನಿವಾಸ್, ‘ಬೆಸ್ಕಾಂನ್ನು ಖಾಸಗೀಕರಣ ಮಾಡಿದರೆ ಪ್ರಸ್ತುತ ಸರ್ಕಾರ ನೀಡುತ್ತಿರುವ ಪ್ರತಿಯೊಂದು ಸೌಲಭ್ಯಗಳು ಸಿಗುವುದಿಲ್ಲ. ರೈತರಿಗೆ ಉಚಿತ ಸೌಲಭ್ಯಗಳು ಇರುವುದಿಲ್ಲ. ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಬಡವರಿಗೆ ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆಯಡಿ ಮನೆಗಳಿಗೆ ಉಚಿತ ವಿದ್ಯುತ್ ಪೂರೈಕೆಗೆ ಕಡಿವಾಣ ಬೀಳಲಿದೆ. ಎಸ್ಸಿ ಎಸ್ಟಿ ಸಮುದಾಯಕ್ಕೆ ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಿಸುವ ಕೊಳವೆ ಬಾವಿಗಳಿಗೆ ಬೆಸ್ಕಾಂನಿಂದ ವಿದ್ಯುತ್ ಕಂಬಗಳು ಮತ್ತು ಇತರ ಪರಿಕರ ಉಚಿತವಾಗಿ ನೀಡಿ ಕೊಳವೆ ಬಾವಿಗೆ ಸಂಪರ್ಕ ವ್ಯವಸ್ಥೆ ಮಾಡುತ್ತಿದ್ದು ಅದು ಸಹ ತಪ್ಪಿ ಹೋಗಲಿದೆ. ಕೇಂದ್ರ ಸರ್ಕಾರ ಈಗಾಗಲೇ ಕೆಲವು ರಾಜ್ಯಗಳಲ್ಲಿ ಖಾಸಗಿಕರಣ ಮಾಡಿರುವುದರಿಂದ ರೈತರು ಮತ್ತು ಸಾರ್ವಜನಿಕರು ಶೋಷಣೆಗೆ ಒಳಗಾಗುತ್ತಿದ್ದಾರೆ’ ಎಂದು ದೂರಿದರು.

‘ರೈತರಿಗೆ ಒಂದು ಕೊಳವೆ ಬಾವಿಗೆ ನೂತನವಾಗಿ ಸಂಪರ್ಕ ಕಲ್ಪಿಸಲು ₹ 10ಸಾವಿರದಿಂದ 20 ಸಾವಿರ ಮಾತ್ರ ಬೆಸ್ಕಾಂ ರೈತರಿಂದ ಪಡೆಯುತ್ತದೆ. ಉಳಿದ ಮೊತ್ತವನ್ನು ಬೆಸ್ಕಾಂ ಭರಿಸಿಕೊಳ್ಳತ್ತದೆ. ಖಾಸಗಿರಣದಲ್ಲಿ ಈ ವ್ಯವಸ್ಥೆ ಇರುವುದಿಲ್ಲ. ವಾಣಿಜ್ಯ ಮಳಿಗೆಗಳು ವಾಸದ ಮನೆ ಇತರೆ ಕಟ್ಟಡಗಳಿಗೆ ಈಗಿರುವಂತೆ ಸ್ಲಾಬ್ ದರ ಇರುವುದಿಲ್ಲ. ಯುನಿಟ್ ದರ ಎಲ್ಲರಿಗೂ ಒಂದೇ ಮಾನದಂಡ ಆಗಿರುತ್ತದೆ’ ಎಂದರು.

ಖಾಸಗೀಕರಣವಾದರೆ ಪ್ರತಿ ಯೂನಿಟ್ ದರ ಬೇಕಾಬಿಟ್ಟ ಹೆಚ್ಚಾಗುವ ಸಾಧ್ಯತೆ ಇದ್ದು ಪ್ರತಿ ಮನೆಗೆ ಫ್ರಿಪೇಯ್ಡ್ ಮೀಟರ್ ಅಳವಡಿಸಲೇಬೇಕು. ಖಾಸಗಿ ವ್ಯವಸ್ಥೆಯಲ್ಲಿ ತನೆಗೆ ಇಷ್ಟ ಬಂದವರನ್ನು ನೇಮಕ ಮಾಡುವ ಮತ್ತು ಕೆಲಸದಿಂದ ತೆಗೆದುಹಾಕುವ ಅಧಿಕಾರ ಅವರ ಕೈಯಲ್ಲಿರುತ್ತದೆ. ಆಕಸ್ಮಿಕವಾಗಿ ಮನೆಯ ವಿದ್ಯುತ್ ಕಡಿತಗೊಂಡರೆ ಸರ್ವಿಸ್ ಶುಲ್ಕ ನೀಡಬೇಕು. ಸಿಬ್ಬಂದಿಗೆ ಸಮಾನ ವೇತವು ಸಿಗುವುದಿಲ್ಲ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.