ಸೋಮವಾರ, ನವೆಂಬರ್ 30, 2020
19 °C

ರಾಗಿ ಉತ್ತಮ ಇಳುವರಿ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಬಾರಿ ರಾಗಿ ಬೆಳೆ ಉತ್ತಮವಾಗಿದೆ. ಹದವಾಗಿ ಮಳೆಯಾಗಿರುವ ಕಾರಣ ಇಳುವರಿ ಹೆಚ್ಚಳವಾಗಲಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ವಿಭಾಗದ ಪ್ರಾಧ್ಯಾಪಕ ಡಾ.ವೈ.ಎನ್‌. ಶಿವಲಿಂಗಯ್ಯ ಹೇಳಿದರು.

ತಾಲ್ಲೂಕಿನ ಕಾರೇಪುರ ಗ್ರಾಮದಲ್ಲಿ ನಡೆದ ರಾಗಿ ಕ್ಷೇತ್ರೋತ್ಸವದಲ್ಲಿ ಮಾತನಾಡಿದ ಅವರು, 120‌ರಿಂದ 125 ದಿನಗಳಲ್ಲಿ ಕೊಯ್ಲಿಗೆ ಬರುವ ಎಂ.ಆರ್‌6, 100 ರಿಂದ 105 ದಿನಗಳಲ್ಲಿ ಕೊಯ್ಲಿಗೆ ಬರುವ ಎಂ.ಎಲ್‌ 365, ಅಲ್ಪಾವಧಿ ತಳಿಯಾದ ಕೆ.ಎಂ.ಆರ್‌ 340 ತಳಿಯು 95 ರಿಂದ 100 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ ಎಂದು ತಿಳಿಸಿದರು.

ಮುಂಗಾರಿನ ಸಮಯದಲ್ಲಿ ರಾಗಿ ಬಿತ್ತನೆ ಬೇಗನೆ ಆರಂಭವಾದರೆ ರೈತರು ದೀರ್ಘಾವಧಿ ತಳಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದರು.

ಕ್ಷೇತ್ರೋತ್ಸವದಲ್ಲಿ ಯೋಜನಾ ಸಹಾಯಕ ಚಂದ್ರಶೇಖರ್, ಪ್ರಗತಿಪರ ರೈತ ಕೃಷ್ಣಮೂರ್ತಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.