ಶನಿವಾರ, ಮೇ 15, 2021
25 °C

ದೊಡ್ಡಬಳ್ಳಾಪುರ: ಬಿಸಿಲಿನ ಬೇಗೆ ದೂರ ಮಾಡಿದ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಡಿಸೆಂಬಂರ್‌ ನಂತರ ಇದೆ ಪ್ರಥಮ ಬಾರಿಗೆ ತಾಲ್ಲೂಕಿನ ವಿವಿಧೆಡೆಗಳಲ್ಲಿ ಬುಧವಾರ ಸಂಜೆ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ತಂಪನೆಯ ವಾತಾವರಣ ಉಂಟಾಗಿದೆ.

ಸಂಜೆ 4 ಗಂಟೆಯಿಂದ ಆರಂಭವಾದ ಮಳೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಬಿದ್ದಿದೆ. ಯುಗಾದಿ ಹಬ್ಬದ ನಂತರ ಸಾಮಾನ್ಯವಾಗಿ ಭರಣಿ ಮಳೆಯಿಂದಲೆ ಮುಂಗಾರು ಪೂರ್ವ ಮಳೆ ಆರಂಭವಾಗುತ್ತದೆ. ‘ಭರಣಿ ಮಳೆ ಬಿದ್ದರೆ ಧರಣಿಯಲ್ಲಾ ಬೆಳೆ’ ಎನ್ನುವ ಗಾದೆಯು ಇದೆ. ಆದರೆ ಈ ಬಾರಿ ತಾಲ್ಲೂಕಿನಲ್ಲಿ ಭರಣಿ ಮಳೆ ಬಿದ್ದಿಲ್ಲ. ಈಗ ಅಶ್ವಿನಿ ಮಳೆ ಬಿದ್ದಿದೆ. ಹೀಗಾಗಿ ಈ ಬಾರಿ ಮಳೆ, ಬೆಳೆ ಅಷ್ಟಕ್ಕಷ್ಟೆ ಎನ್ನುತ್ತಾರೆ ಹಿರಿಯ ರೈತರು.

ಮುಂಗಾರು ಪೂರ್ವ ಮಳೆ ಬರುವಾಗ ಬಿರುಗಾಳಿ ಆರ್ಭಟ, ಮಳೆಯ ರಭಸ, ಗುಡು, ಸಿಡಿಲು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಆದರೆ ಬುಧವಾರ ಸಂಜೆ ಬಿರುಗಾಳಿ ಇಲ್ಲದೆ ಮಳೆ ಬಿದ್ದಿದೆ. ಹೀಗಾಗಿ ಬೆಳೆಗಳಿಗೆ ಯಾವುದೇ ರೀತಿಯ ಹಾನಿಯಾಗಿರುವ ವರದಿಯಾಗಿಲ್ಲ.

ಗುಡುಗು ಸಹಿತ ಮಳೆ
ಸೂಲಿಬೆಲೆ:
ಹೋಬಳಿ ಮತ್ತು ನಂದಗುಡಿ ಹೋಬಳಿಯ ಹಲವು ಕಡೆ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಬಿರುಸು ಮಳೆ ಸುರಿಯಿತು.

ಬೆಳಿಗ್ಗೆಯಿಂದಲೇ ಮೋಡಗಳು ಕಟ್ಟಿಕೊಂಡು ಜನರಲ್ಲಿ ಮಳೆಯ ಭರವಸೆಯನ್ನು ಮೂಡಿಸಿದ್ದವು. ಬೇಸಿಗೆಯ ಧಗೆಯಿಂದ ಕಂಗೆಟ್ಟಿದ್ದ ಜನರಿಗೆ ಬುಧವಾರ ಸುರಿದ ಮಳೆ ಸ್ವಲ್ಪ ಮಟ್ಟಿಗೆ ತಂಪನ್ನು ನೀಡಿತು. ಸೂಲಿಬೆಲೆ ಹೋಬಳಿಯ ಮುತ್ಸಂದ್ರ ಸೇರಿದಂತೆ ಅನೇಕ ಕಡೆ ಹಾಗೂ ನಂದಗುಡಿಯ ಹೋಬಳಿಯಲ್ಲೂ ಗುಡುಗು ಸಹಿತ ಉತ್ತಮ ಮಳೆ ಸುರಿದು ಭೂಮಿಯನ್ನು ತಂಪಾಗಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು