ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆನೇಕಲ್: ಉದ್ಯಾನದಲ್ಲಿ ನಿಂತ ಮಳೆ ನೀರು

Published 8 ಜೂನ್ 2024, 14:02 IST
Last Updated 8 ಜೂನ್ 2024, 14:02 IST
ಅಕ್ಷರ ಗಾತ್ರ

ಆನೇಕಲ್ : ಪಟ್ಟಣದ ಏಕೈಕ ಪಾರ್ಕ್‌ ರಾಜ್‌ಕುಮಾರ್‌ ಉದ್ಯಾನದಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಮಕ್ಕಳು ಆಟವಾಡಲು ಹಾಗೂ ಹಿರಿಯರು ವಾಯುವಿಹಾರ ಮಾಡಲು ಸಮಸ್ಯೆಯಾಗಿದೆ.

ಭಾರಿ ಮಳೆಯಿಂದ ನೀರು ಉದ್ಯಾನದಲ್ಲಿ ಹರಿದು, ಉದ್ಯಾನದ ತುಂಬಾ ನೀರು ತುಂಬಿದೆ. ಇದರಿಂದಾಗಿ ಪ್ರತಿ ದಿನ ಇಲ್ಲಿ ಬರುತ್ತಿದ್ದ ಸಾರ್ವಜನಿಕರಿಗೆ ಮತ್ತು ಮಕ್ಕಳು ಒಂದು ವಾರದಿಂದ ಇತ್ತ ಬಂದಿಲ್ಲ.

ಮಳೆ ನೀರನ್ನು ಉದ್ಯಾನದಿಂದ ಹೊರ ಹಾಕಿ, ಉದ್ಯಾನ ಬಳಕೆ ಮುಕ್ತಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಉದ್ಯಾನ ಸುಸಜ್ಜಿತಗೊಳಿಸಿ, ಮಳೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಬೇಕೆಂದು ಎಂದು ವಾಯುವಿಹಾರಿ ಚಿಕ್ಕಣ್ಣ ಆಗ್ರಹಿಸಿದ್ದಾರೆ.

ಮಳೆಯಿಂದಾಗಿ ಉದ್ಯಾನದಲ್ಲಿ ನೀರು ತುಂಬಿದೆ. ಈ ಬಗ್ಗೆ ಪುರಸಭೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ವೈಜ್ಞಾನಿಕವಾಗಿ ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಪುರಸಭೆ ಸದಸ್ಯ ಎನ್‌.ಎಸ್.ಪದ್ಮನಾಭ ತಿಳಿಸಿದ್ದಾರೆ.

ಭಾರಿ ಮಳೆಯಿಂದಾಗಿ ವಾಯು ವಿಹಾರದ ಪಥದಲ್ಲಿ ನೀರು ನಿಂತಿರುವುದು
ಭಾರಿ ಮಳೆಯಿಂದಾಗಿ ವಾಯು ವಿಹಾರದ ಪಥದಲ್ಲಿ ನೀರು ನಿಂತಿರುವುದು
ಮಳೆ ಬಂದಾಗ ಪದೇ ಪದೇ ಉದ್ಯಾನದಲ್ಲಿ ನೀರು ನಿಲ್ಲುತ್ತಿದೆ. ಕೆರೆಯ ಅಂಗಳದಲ್ಲಿ ಉದ್ಯಾನವನ್ನು ನಿರ್ಮಿಸಿರುವುದರಿಂದ ಈ ಸಮಸ್ಯೆಯಿದೆ. ಉದ್ಯಾನದಲ್ಲಿ ಹರಿಯುವ ಮಳೆಯ ನೀರು ಸಮೀಪದ ಕಲ್ಯಾಣಿಗೆ ಹರಿಯುವಂತೆ ಮಾಡಲು ಚಿಂತನೆ ಮಾಡಲಾಗಿದೆ
- ರಾಜೇಶ್, ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT