ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪೋರೇಟ್ ಕಂಪನಿಗಳಿಗೆ ದೇಶ ಅಡಮಾನ : ಆರೋಪ

Last Updated 20 ಸೆಪ್ಟೆಂಬರ್ 2020, 3:29 IST
ಅಕ್ಷರ ಗಾತ್ರ

ದೇವನಹಳ್ಳಿ: ‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಪೋರೇಟ್ ಕಂಪನಿಗಳಿಗೆ ದೇಶವನ್ನು ಅಡಮಾನ ಇಟ್ಟಿವೆ’ ಎಂದು ಪ್ರಾಂತ ರೈತ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಎನ್.ವೀರಣ್ಣ ಆರೋಪಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೆ.21ರಿಂದ 30 ರವರೆಗೆ ಬೆಂಗಳೂರಿನ ಫ್ರೀಡಮ್ ಉದ್ಯಾನವನದಲ್ಲಿ ಪ್ರಗತಿ ಪರ ರೈತ ಸಂಘಟನೆಗಳು ಒಕ್ಕೂಟದ ವತಿಯಿಂದ ನಡೆಯಲಿರುವ ಧರಣಿ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘ದೇಶದ ಜನತೆಗೆ ದೇಶದ್ಯಾಂತ ಆರ್ಥಿಕ ಬಿಕ್ಕಟ್ಟು ಮತ್ತೊಂದೆಡೆ ಕೋವಿಡ್ 19ರ ಸಂಕಷ್ಟವನ್ನು ಅತ್ಯಂತ ಗಂಭೀರವಾಗಿ ಎದುರಿಸುತ್ತಿರುವ ಸಂದರ್ಭದಲ್ಲಿ ರಕ್ಷಣೆಗೆ ನಿಲ್ಲದೆ, ಪರಿಣಾಮಕಾರಿಯಾಗಿ ಎದುರಿಸಿ ಜನತೆಗೆ ನೆರವಾಗುವ ಬದಲು ಕಾರ್ಪೋರೇಟ್ ಕಂಪನಿಗಳಿಗೆ ಲೂಟಿ ಮಾಡಲು ಸರ್ಕಾರ ವಿವಿಧ ಕಾನೂನು ತಿದ್ದುಪಡಿ ತಂದು ಅವಕಾಶ ಮಾಡಿಕೊಟ್ಟಿದೆ’ ಎಂದು ದೂರಿದರು.

‘ರೈಲ್ವೆ, ದೂರ ಸಂಪರ್ಕ ಇಲಾಖೆ, ವಿದ್ಯುತ್ ಮತ್ತು ಸಾರ್ವಜನಿಕ ರಂಗದ ಕೈಗಾರಿಕೆಗಳು ಹಾಗೂ ಹಣಕಾಸು ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿದೆ. ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಇಡೀ ಆಡಳಿತ ವ್ಯವಸ್ಥೆಯನ್ನು ಖಾಸಗಿಕರಣಗೊಳಿಸಿ ಪ್ರಜಾ ತಂತ್ರವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ ಎಂದು ದೂರಿದರು. ಉಳುವವನೇ ಭೂಮಿ ಒಡೆಯ ಎಂಬುದು ಸ್ವಾತಂತ್ರ್ಯ ಹೋರಾಟದ ಮುಖ್ಯ ಬೇಡಿಕೆಯಾಗಿತ್ತು. ಜಮೀನುದಾರಿ ದಬ್ಬಾಳಿಕೆಯನ್ನು ಕೊನೆಗಾಣಿಸಿ ದೇಶದ ಸಾಮಾಜಿಕ ಅಭಿವೃದ್ಧಿಗೆ ಮತ್ತು ಸಮಾನತೆಗೆ ನಾಂದಿಯಾಗಲಿದೆ ಎಂಬ ಅಶಾಭಾವನೆ ಹೊಂದಿದ್ದ ಸಂದರ್ಭದಲ್ಲಿ ಸ್ವಾತಂತ್ರ್ಯದ ನಂತರ ಆಡಳಿತಕ್ಕೆ ಬಂದ ಸರ್ಕಾರಗಳು ಅರ್ಹರಿಗೆ ಜಮೀನು ನೀಡುವ ಬದಲು ಭೂಮಿ ಇರುವ ರೈತರನ್ನು ಒಕ್ಕಲೆಬ್ಬಿಸಿ ಹೊಸಬಂಡವಾಳ ಶಾಹಿಗಳಿಗೆ ಸರ್ಕಾರ ಮಣಿ ಹಾಕುತ್ತಿದೆ. ಇದು ದೇಶದ ಸಮಗ್ರ ಅಭಿವೃದ್ಧಿಗೆ ಮಾರಕ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಂತ ರೈತ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ವೆಂಕಟೇಗೌಡ ಮಾತನಾಡಿದರು.

ಸಂಘದ ವಿವಿಧ ಘಟಕದ ಪದಾಧಿಕಾರಿಗಳಾದ ಗುರುಲಿಂಗಪ್ಪ, ಸುಬ್ರಮಣಿ, ನಾಗರಾಜ್, ಮುನಿರಾಜ್, ಲಿಂಗರಾಜು, ನಾಗರತ್ನಮ್ಮ, ಕೃಷ್ಣಪ್ಪ, ಪೈ.ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT