ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಲಿಬೆಲೆ: ರಾಜಕಾಲುವೆ ಒತ್ತುವರಿ ತೋಟಗಳಿಗೆ ನೀರು

Last Updated 20 ನವೆಂಬರ್ 2021, 5:18 IST
ಅಕ್ಷರ ಗಾತ್ರ

ಸೂಲಿಬೆಲೆ: ‘ರಾಜಕಾಲುವೆಯನ್ನು ಕೆಲವು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವುದರಿಂದ ತೋಟಗಳಲ್ಲಿ ಮಳೆ ನೀರು ನಿಂತು ಬೆಳೆ ನಷ್ಟವಾಗುತ್ತಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು’ ಎಂದು ವಾಲ್ಮೀಕಿ ನಗರದ ರೈತ ನಾಗರಾಜು ಆಗ್ರಹಿಸಿದ್ದಾರೆ.

ಸೂಲಿಬೆಲೆ ಹೋಬಳಿಯ ಅರಸನಹಳ್ಳಿ ಅಂಕೋನಹಳ್ಳಿ ಕಡೆಯಿಂದ ಪಟ್ಟಣದ ಕುರುಬರಪೇಟೆ ಹಾದು ಹೋಗುವ ರಾಜಕಾಲುವೆ, ಹೊಸಕೋಟೆ ದೊಡ್ಡಕೆರೆಗೆ ಸಂಪರ್ಕ ಕಲ್ಪಿಸುವ ದಕ್ಷಿಣ ಪಿನಾಕಿನಿ ಕಾಲುವೆಗೆ ಸೇರುತ್ತದೆ. ಸೂಲಿಬೆಲೆ ಕೆರೆ ಅಂಚಿನಲ್ಲಿ (ಕಾನೆ) ಹಾದು ಹೋಗುವ ರಾಜಕಾಲುವೆಯನ್ನು ಕೆಲವು ಸ್ಥಳೀಯ ಜಮೀನು ಮಾಲಿಕರು ಒತ್ತುವರಿ ಮಾಡಿದ್ದಾರೆ. ಸುಮಾರು ಒಂದು ಸರಪಳಿಯಷ್ಟು ಅಗಲ ಇರುವ ರಾಜ ಕಾಲುವೆಯನ್ನು ಆಕ್ರಮಿಸಿಕೊಂಡಿದ್ದು, ಪ್ರಸ್ತುತ 4-5 ಅಡಿ ಅಗಲ ಕಾಲುವೆ ಮಾತ್ರ ಉಳಿದಿದೆ.

ರಾಜಕಾಲುವೆ ಒತ್ತುವರಿಯಿಂದ ಪ್ರತಿ ಸಲ ಮಳೆ ಬಂದಾಗ ಕಾಲುವೆಯ ನೀರು ತೋಟಗಳಿಗೆ ನುಗ್ಗುತ್ತದೆ. ಇದರಿಂದ ಬೆಳೆ ನಷ್ಟ ಆಗುತ್ತಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT