ಪ್ರಾಮಾಣಿಕ ಕೆಲಸ; ನಿವೃತ್ತಿ ಖುಷಿ ಕೊಟ್ಟಿದೆ
‘ನಾನು ಪ್ರಾಧ್ಯಾಪಕ ಹುದ್ದೆಗೆ ಆಗಲಿ ಅಥವಾ ಉಪಕುಲಪತಿ ಹುದ್ದೆಗೆ ಒಂದು ರೂಪಾಯಿ ಕೊಡದೆ ನೇಮಕವಾಗಿದ್ದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡಲು ನನಗೆ ಸಾಧ್ಯವಾಯಿತು. ಹಾಗಾಗಿ ನನ್ನ ನಿವೃತ್ತಿ ನನಗೆ ಸಂತೋಷ ಕೊಟ್ಟಿದೆ. ನಿವೃತ್ತಿ ನಂತರದಲ್ಲಿ ನನಗೆ ಇಷ್ಟದ ವೃತ್ತಿ ಬೋಧನೆ ಹಾಗೂ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವೆ’ ಎಂದು ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಉಪಕುಲಪತಿ ಪ್ರೊ.ನಿರಂಜನ ವಾನಳ್ಳಿ ಹೇಳಿದರು.