ಮರುಮೌಲ್ಯಮಾಪನ: ಜಿಲ್ಲೆಗೆ 4ನೇ ಸ್ಥಾನ 

ಭಾನುವಾರ, ಜೂನ್ 16, 2019
22 °C

ಮರುಮೌಲ್ಯಮಾಪನ: ಜಿಲ್ಲೆಗೆ 4ನೇ ಸ್ಥಾನ 

Published:
Updated:
Prajavani

ದೇವನಹಳ್ಳಿ: ನಗರದ ಎಸ್.ಎಲ್.ಎಸ್ ಆಂಗ್ಲ ಶಾಲೆ 10ನೇ ತರಗತಿಯ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ಮದನ್ ಗೌಡ ಮರು ಮೌಲ್ಯಮಾಪನದ ನಂತರ ಜಿಲ್ಲೆಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಶಾಲಾ ಆಡಳಿತ ಕಾರ್ಯದರ್ಶಿ ಡಿ.ಎಸ್. ಧನಂಜಯ ತಿಳಿಸಿದರು.

ಇಲ್ಲಿನ ಎಸ್.ಎಲ್.ಎಸ್ ಶಾಲೆಯಲ್ಲಿ ಮಾಹಿತಿ ನೀಡಿದ ಅವರು, 11 ವರ್ಷಗಳಿಂದ 10ನೇ ತರಗತಿಯಲ್ಲಿ ಶೇ 100 ರಷ್ಟು ಫಲಿತಾಂಶ ಶಾಲೆ ಪಡೆಯುತ್ತಿದೆ. ಈ ಬಾರಿಯೂ ಶೇ 100 ರಷ್ಟು ಫಲಿತಾಂಶ ಬಂದಿದೆ. ವಿದ್ಯಾರ್ಥಿ ಮದನ್ ಗೌಡಗೆ ಫಲಿತಾಂಶ ಪ್ರಕಟಗೊಂಡಾಗ 625 ಕ್ಕೆ 609 ಅಂಕಗಳು ಬಂದಿದ್ದವು ಎಂದರು.

ವಿದ್ಯಾರ್ಥಿಗೆ ಕೆಲವು ವಿಷಯಗಳಲ್ಲಿ ನಿರೀಕ್ಷಿತ ಅಂಕಗಳು ಬಂದಿರಲಿಲ್ಲ. ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ಮರು ಮೌಲ್ಯಮಾಪನ ಮಾಡಿಸಿದಾಗ ಈ ಹಿಂದೆ ಇದ್ದ 91 ಅಂಕಗಳಿಗೆ ಪ್ರಸ್ತುತ 96 ಅಂಕ, ಸಮಾಜ ವಿಜ್ಞಾನದಲ್ಲಿ 97 ರ ಬದಲು 99ಕ್ಕೆ ಏರಿಕೆಯಾಗಿ ಒಟ್ಟು 616 (ಶೇ 98.56) ಅಂಕಗಳಿಸಿ ಜಿಲ್ಲೆಗೆ ನಾಲ್ಕನೇ ಸ್ಥಾನ ರಾಜ್ಯ ಮಟ್ಟದಲ್ಲಿ 10ನೇ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.

ಸುಹಾಸ್ ರೆಡ್ಡಿ ವಿದ್ಯಾರ್ಥಿಯ ಆಂಗ್ಲ ಮತ್ತು ಸಮಾಜ ವಿಷಯದಲ್ಲಿ ಮರುಮೌಲ್ಯಮಾಪನ ಅರ್ಜಿ ಸಲ್ಲಿಸಲಾಗಿತ್ತು. ಎರಡು ವಿಷಯದಲ್ಲಿ ಹೆಚ್ಚುವರಿ 14 ಅಂಕಗಳು ದೊರಕಿವೆ. ದರ್ಶನ್ ಡಿ. ನರಗುಂದ ಎಂಬ ವಿದ್ಯಾರ್ಥಿ ವಿಜ್ಞಾನ ವಿಷಯದಲ್ಲಿ ಮರು ಮೌಲ್ಯಮಾಪನ ಮಾಡಿಸಿದಾಗ ಈ ಹಿಂದೆ ಇದ್ದ 88 ಅಂಕಕ್ಕೆ ಬದಲಾಗಿ 4 ಅಂಕ ಹೆಚ್ಚಳವಾಗಿ 92 ಅಂಕ ಬಂದಿದೆ ಎಂದು ಹೇಳಿದರು.

ಪರೀಕ್ಷಾ ಮಂಡಳಿಯು ಫಲಿತಾಂಶವನ್ನು ತ್ವರಿತವಾಗಿ ಪ್ರಕಟಿಸಬೇಕು ಎಂಬ ಉದ್ದೇಶ ಒಂದೆಡೆಯಾದರೆ ಶಿಸ್ತುಬದ್ಧ ಮೌಲ್ಯಮಾಪಕರನ್ನು ನೇಮಕ ಮಾಡಿಲ್ಲ ಎಂದು ದೂರಿದರು. ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !