ವಿಜಯಪುರದಲ್ಲಿ ಇಂದು ‘ಧರ್ಮ ಚಿಂತನೆ’

7

ವಿಜಯಪುರದಲ್ಲಿ ಇಂದು ‘ಧರ್ಮ ಚಿಂತನೆ’

Published:
Updated:
Deccan Herald

ವಿಜಯಪುರ: ಮಾನವ ಜನ್ಮ ಶ್ರೇಷ್ಠವಾದದ್ದು. ದ್ವೇಷ, ಅಸೂಯೆ ಬಿಟ್ಟು ಪ್ರೀತಿ – ವಿಶ್ವಾಸದಿಂದ ಬದುಕಿ ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕೆಂದು ಮಾನವೀಯತೆಯ ಉದಾತ್ತ ಗುಣಗಳನ್ನು ಸಾರಿದ್ದ ಕೈವಾರ ಯೋಗಿ ನಾರೇಯಣ ತಾತಯ್ಯ ಅವರ ತತ್ವ ಚಿಂತನೆ ಹಿನ್ನೆಲೆಯಲ್ಲಿ ‘ಧರ್ಮ ಚಿಂತನೆ’ಯು ಅ.13ರಂದು ಬೆಳಿಗ್ಗೆ 8ಕ್ಕೆ ನಡೆಯಲಿದೆ.

ಹುಬ್ಬಳ್ಳಿ ಮೂರು ಸಾವಿರ ಮಠದ ಪೀಠಾಧಿಪತಿ ಗುರುಸಿದ್ದರಾಜ ಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಲಿದ್ದಾರೆ ಎಂದು  ಶ್ರೀಕೃಷ್ಣ ಸತ್ಸಂಗದ ಸೇವಾ ಸಮಿತಿ ಅಧ್ಯಕ್ಷ ವಿ.ಎನ್.ವೆಂಕಟೇಶ್ ತಿಳಿಸಿದರು.

ಇಲ್ಲಿನ ಬಲಿಜಿಗರ ಪೇಟೆಯಲ್ಲಿರುವ ವೆಂಕಟರವಣಸ್ವಾಮಿ ದೇವಾಲಯದಲ್ಲಿ ಪಾದಪೂಜೆ ನೆರವೇರಿಸಿದ ನಂತರ ವಿವಿಧೆಡೆ ಪಾದಪೂಜೆ ನೆರವೇರಲಿದೆ. ಸಂಜೆ 4ಕ್ಕೆ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಂ ಅವರೊಂದಿಗೆ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಪೂಜೆ ನೆರವೇರಿಸಲಿದ್ದಾರೆ.

ನಂತರ ಪೂರ್ಣಕುಂಭಯೊಂದಿಗೆ ನಗರೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಗಾಂಧಿಚೌಕದಲ್ಲಿ ನಿರ್ಮಾಣವಾಗಿರುವ ವೇದಿಕೆಗೆ ಬರಲಿಲಿದ್ದಾರೆ. ರಾತ್ರಿ 9ರವರೆಗೂ ‘ಧರ್ಮ ಚಿಂತನ’ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !