ದರೋಡೆ: ಇಬ್ಬರು ಪೊಲೀಸರಿಗೆ ಜೈಲು ಶಿಕ್ಷೆ

7

ದರೋಡೆ: ಇಬ್ಬರು ಪೊಲೀಸರಿಗೆ ಜೈಲು ಶಿಕ್ಷೆ

Published:
Updated:

ವಿಜಯಪುರ: ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಂಡಿಯನ್‌ ರಿಸರ್ವ್‌ ಬೆಟಾಲಿಯನ್‌ನ (ಐಆರ್‌ಬಿ) ಇಬ್ಬರು ಪೊಲೀಸರಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಮಹಾದೇವ ಅಮೋಘಿ ಟಕ್ಕೆ, ಜಗದೀಶ ಜೈಲು ಶಿಕ್ಷೆಗೆ ಗುರಿಯಾದ ಪೊಲೀಸರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಬು ರಜಾಕ್‌ಸಾಬ್‌ ಎಂಬಾತನೂ ಜೈಲು ಶಿಕ್ಷೆಗೆ ಗುರಿಯಾಗಿದ್ದು, ಮೂವರಿಗೂ ತಲಾ ₹ 50 ಸಾವಿರ ದಂಡ ವಿಧಿಸಲಾಗಿದೆ.

ಅಂಗಡಿಗಳಿಗೆ ಸಿಹಿ ಪದಾರ್ಥ ಸರಬರಾಜು ಮಾಡುತ್ತಿದ್ದ ದಿನಕರ್‌ ಎಂಬುವವರು ಆಗಾಗ್ಗೆ ಹಣ ವಸೂಲಿಗಾಗಿ ಬಾಡಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಒಳಸಂಚು ರೂಪಿಸಿ ₹12 ಲಕ್ಷ ದರೋಡೆ ಮಾಡಿದ್ದರು. ಸಿಂದಗಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಕೆ.ಬಿ.ಗೀತಾ ಆದೇಶ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !